(Blood bank)ಬ್ಲಡ್ ಬ್ಯಾಂಕ್ಗಳಿಗೆ ಬರುತ್ತಿದೆ ಎಚ್ಐವಿ ಸೋಂಕಿತ ರಕ್ತ
ಬೆಂಗಳೂರು, ಜುಲೈ 15: ಆಹಾರ ಮತ್ತು ಆರೋಗ್ಯ ಇಲಾಖೆ (Karnataka Health Department) ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲು ಮುಂದಾಗಿದೆ. ಅಪಾಯಕಾರಿಯಾದ ಕೃತಕ ಬಣ್ಣ ನಿಷೇಧ, ರಾಸಾಯನಿಕಗಳ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಮಧ್ಯೆ, ಆರೋಗ್ಯ ಇಲಾಖೆ ಮತ್ತೊಂದ್ದು ಪ್ರಯೋಗಕ್ಕೂ ಮುಂದಾಗಿದೆ. ಔಷಧ ನಿಯಂತ್ರಣ ಮಂಡಳಿಗೆ (blood bank)ರಕ್ತ ನಿಧಿ ಘಟಕಗಳ (Blood Banks) ಬಗ್ಗೆ ಹೆಚ್ಚು ಹಣ ಸೂಲಿಗೆ ಬಗ್ಗೆ ಸಾಲು ಸಾಲು ದೂರುಗಳು ಬಂದ ಕಾರಣ ಬ್ಲಡ್ ಘಟಕಗಳಿಗೆ ಭೇಟಿ ನೀಡಿ ಸ್ಯಾಂಪಲ್ಸ್ ಸಂಗ್ರಹಿಸಲು ಮುಂದಾಗಿದೆ. ಮತ್ತೊಂದೆಡೆ, ರಕ್ತನಿಧಿ ಘಟಕಗಳಿಗೆ ಅಪಾಯಕಾರಿ ಎಚ್ಐವಿ ಸೋಂಕಿತ ರಕ್ತ ಬರುತ್ತಿವೆ ಎಂಬ ಆರೋಪಗಳು ಆತಂಕಕ್ಕೆ ಕಾರಣವಾಗಿವೆ.