ಚಿನ್ನಾಭರಣ ಖರೀದಿ ಮಾಡಿ, ಮಗುವನ್ನೇ ಮರೆತಳು!
ಚಿನ್ನಾಭರಣ ಖರೀದಿ ಮಾಡಿ, ಮಗುವನ್ನೇ ಮರೆತಳು! - webnews kannada
ಚಿನ್ನಾಭರಣ ಖರೀದಿಗೆ ಬಂದ ತಾಯಿ ಮಗುವನ್ನೇ ಮರೆತು ಮನೆಗೆ ಹೋದ ಘಟನೆ ಹಾಸನದಲ್ಲಿ ನಡೆದಿದೆ. ಅಳುತ್ತಿದ್ದ ಮಗುವನ್ನು ಸಂತೈಸಿದ ಅಪರಿಚಿತ ಮಹಿಳೆ
ಚಿನ್ನಾಭರಣ ಖರೀದಿಗೆ ಬಂದ ತಾಯಿ ಮಗುವನ್ನೇ ಮರೆತು ಮನೆಗೆ ಹೋದ ಘಟನೆ ಹಾಸನದಲ್ಲಿ ನಡೆದಿದೆ. ಅಳುತ್ತಿದ್ದ ಮಗುವನ್ನು ಸಂತೈಸಿದ ಅಪರಿಚಿತ ಮಹಿಳೆ ಕಂದನನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಚಿಕ್ಕ ಮಗು ಸುಪ್ರಿಯಾ ಜೊತೆ ಹಾಸನದ ಗಾಂಧಿ ಬಜಾರ್‌ಗೆ ಬಂದಿದ್ದ ತಾಯಿ ಉಷಾ ಮಗುವನ್ನು ಮರೆತು ಮನೆಗೆ ಮರಳಿದ್ದಾಳೆ. ಮನೆಗೆ ಬಂದ ಬಳಿಕ ಮಗು ಜೊತೆಯಲ್ಲಿ ಇಲ್ಲ ಎಂಬುದರ ಅರಿವಾಗಿದೆ. ಮಗುವನ್ನು ಕರೆದುಕೊಂಡು ಹೋಗಿದ್ದ ಭವಾನಿ ಮಗುವನ್ನು ಸಂತೈಸಿದ್ದಾರೆ. ಇದೀಗ ತಾಯಿಗೆ ಮಗುವನ್ನು ಹಸ್ತಾಂತರಿಸಲಾಗಿದೆ.