Webnews kannada

WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ

 

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ   - webnews kannada

ಕೋಟ: ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ  ಕಳಿಬೈಲು ಕೊರಗಜ್ಜ ಇದೀಗ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ.

By Webnewskannada

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ   - webnews kannada

ಕೋಟ: ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ

ಕಳಿಬೈಲು ಕೊರಗಜ್ಜ ಇದೀಗ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ.


ಘಟನೆ ವಿವರ:

ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪರಿಸರದ ಕುಟುಂಬದ ಯಜಮಾನನ ಕೈಯಲ್ಲಿದ್ದ 60 ಗ್ರಾಂ ತೂಕದ (ಸುಮಾರು 6 ಲಕ್ಷ ರೂ. ಮೌಲ್ಯದ ) ಬಂಗಾರದ ಬ್ರೈಸೆಲೆಟ್ಸ್ ಕಳೆದುಹೋಗಿದ್ದು ಯಜಮಾನ ಚಿಂತೆಯಲ್ಲಿ ಮುಳುಗಿದ್ದರು. ಎಲ್ಲಿ ಹುಡುಕಿದರೂ ಕಳೆದುಹೋದ ಬಂಗಾರ ಸಿಗದೇ ಇದ್ದಾಗ ಅದು ಮರೆತು ಬಿಟ್ಟಿದ್ದರು.


ಆದರೆ ಕಳೆದ ಒಂದು ವರ್ಷದ ಹಿಂದೆ ಮನೆ ಕೆಲಸದಾಕೆಗೆ ಮನೆಯ ಯಜಮಾನನ ಕೈಯಲ್ಲಿದ್ದ ಬಂಗಾರ ಸುಮಾರು 15 ವರ್ಷದ ಹಿಂದೆ ಕಳೆದುಹೋದ ವಿಚಾರ ಕಿವಿಗೆ ಬಿತ್ತು.


ಆ ಕ್ಷಣ ಕೆಲಸದಾಕೆಗೆ ಸ್ಮರಣೆಗೆ ಬಂದದ್ದು ಕಳಿಬೈಲು ಕೊರಗಜ್ಜ.

ಈಕೆ ಕಳಿಬೈಲು ಕೊರಗಜ್ಜನ ಭಕ್ತೆಯಾಗಿದ್ದಾಳೆ.

ಆ ಮಹಿಳೆ ಕೊರಗಜ್ಜನ ಸನ್ನಿದಾನಕ್ಕೆ ಬಂದು ಅನನ್ಯ ಭಕ್ತಿಯಿಂದ ಕೊರಗಜ್ಜನನ್ನು ನೆನದು  ತಾನು ಕೆಲಸ ಮಾಡುವ ಯಜಮಾನನ ಕೈಯಲ್ಲಿದ್ದ ಬಂಗಾರದ ಬ್ರೈಸೆಲೆಟ್ಸ್  ಸುಮಾರು 15 ವರ್ಷದ ಹಿಂದೆ ಕಳೆದು ಹೋಗಿದ್ದು. ಆ ಬಂಗಾರವನ್ನು ನೀನು ದೊರಕಿಸಿ ಕೊಟ್ಟರೆ  ಪೂಜೆ ಕೊಡುತ್ತೇನೆ ಎಂದು ಭಕ್ತೆ ಅನನ್ಯ ಭಕ್ತಿಯಿಂದ ಬೇಡಿಕೊಂಡಿದ್ದಳು.


ಭಕ್ತೆಯ ಬೇಡಿಕೆಗೆ ಮಣಿದ ಕೊರಗಜ್ಜ ಒಂದು ವರ್ಷದೊಳಗೆ ಪವಾಡ ಸದೃಷ ರೀತಿಯಲ್ಲಿ ಮನೆಯ ಯಜಮಾನನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಳೆದುಹೋದ 60 ಗ್ರಾಂ ಚಿನ್ನದ 

ಬ್ರೈಸೆಲೆಟ್ಸ್ ಮನೆ ಕೆಲಸದಾಕೆಗೆ  ಸಿಕ್ಕಿರುತ್ತದೆ.


ಕೊರಗಜ್ಜನ ಮಹಿಮೆಗೆ ಭಾವ ಪರಶವಾದ ಮಹಿಳೆ ಮಣ್ಣಲ್ಲಿ ದೊರೆತ 60 ಗ್ರಾಂ ಬಂಗಾರದ ಬ್ರೈಸೆಲೆಟ್ಸ್ ನ್ನು ಪ್ರಾಮಾಣಿಕವಾಗಿ ಮನೆಯ ಯಜಮಾನಿಗೆ ನೀಡಿ. ಆ ಕುಟುಂಬದವರನ್ನು

ಕಳಿಬೈಲಿಗೆ ಕರೆತಂದು ಹರಕೆ ತೀರಿಸಿ ಕೊರಗಜ್ಜ ಮತ್ತು ಪರಿವಾರ ದೈವ ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.






Share this post

See previous post See next post
Advertisement