Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ನಿಮ್ಹಾನ್ಸ್ ಅಧ್ಯಯನದಲ್ಲಿ ಬಹಿರಂಗ ಕೋವಿಡ್ ಲಸಿಕೆಗಳಿಂದ ನರಮಂಡಲದ ಸಮಸ್ಯೆಗಳು ಹೆಚ್ಚು

ನಿಮ್ಹಾನ್ಸ್ ಅಧ್ಯಯನದಲ್ಲಿ ಬಹಿರಂಗ ಕೋವಿಡ್ ಲಸಿಕೆಗಳಿಂದ ನರಮಂಡಲದ ಸಮಸ್ಯೆಗಳು ಹೆಚ್ಚು

NIMHANS ನ ನರವಿಜ್ಞಾನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಎಂ ಅವರ ನೇತೃತ್ವದಲ್ಲಿ, ಈ ಅಧ್ಯಯನ ನಡೆದಿದೆ. ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ವ್ಯಾಕ್ಸಿನೇಷನ್ ಅಭಿಯಾನ ಎರಡನ್ನೂ ಒಳಗೊಂಡು ಅಧ್ಯಯನ ನಡೆಸಲಾಗಿದೆ,

ನಿಮ್ಹಾನ್ಸ್ ಅಧ್ಯಯನದಲ್ಲಿ ಬಹಿರಂಗ ಕೋವಿಡ್ ಲಸಿಕೆಗಳಿಂದ ನರಮಂಡಲದ ಸಮಸ್ಯೆಗಳು ಹೆಚ್ಚು
ಸಂದರ್ಬಿಕ ಚಿತ್ರ
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ನಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನಗಳ ಸರಣಿಯು ಕೋವಿಡ್-19 ಸೋಂಕು ಮತ್ತು ಕೋವಿಡ್ ಲಸಿಕೆ ಎರಡಕ್ಕೂ ಸಂಬಂಧಿಸಿದ ಗಮನಾರ್ಹ ನರವೈಜ್ಞಾನಿಕ ಸಮಸ್ಯೆಗಳನ್ನು ಬಹಿರಂಗಪಡಿಸಿದೆ.

NIMHANS ನ ನರವಿಜ್ಞಾನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಎಂ ಅವರ ನೇತೃತ್ವದಲ್ಲಿ, ಈ ಅಧ್ಯಯನ ನಡೆದಿದೆ. ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ವ್ಯಾಕ್ಸಿನೇಷನ್ ಅಭಿಯಾನ ಎರಡನ್ನೂ ಒಳಗೊಂಡು ಅಧ್ಯಯನ ನಡೆಸಲಾಗಿದೆ, ವೈರಸ್ ಮತ್ತು ಅದರ ಪ್ರತಿಕ್ರಿಯೆಯು ಬಾಹ್ಯ ನರಮಂಡಲದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ವಿವರಿಸುತ್ತದೆ.

ಮಾರ್ಚ್ ಮತ್ತು ಸೆಪ್ಟೆಂಬರ್ 2020 ರ ನಡುವೆ, ನರವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವ 3,200 ರೋಗಿಗಳ ಆಸ್ಪತ್ರೆ ದಾಖಲೆಗಳನ್ನು NIMHANS ಪರಿಶೀಲಿಸಿದೆ. ಅವರಲ್ಲಿ, 120 ರೋಗಿಗಳು (3.75%) ನರವೈಜ್ಞಾನಿಕ ಅಸ್ವಸ್ಥತೆಗಳೊಂದಿಗೆ ಕೋವಿಡ್ ಸೋಂಕನ್ನು ದೃಢಪಡಿಸಿದ್ದಾರೆ. ಈ ರೋಗಿಗಳ ಸರಾಸರಿ ವಯಸ್ಸು 49 ವರ್ಷಗಳು, 3 ರಿಂದ 84 ವರ್ಷಗಳವರೆಗೆ ಇರುತ್ತದೆ.

ಸಾಮಾನ್ಯ ಲಕ್ಷಣಗಳಲ್ಲಿ, , ಅನೋಸ್ಮಿಯಾ ಸೇರಿದೆ. ಅನೇಕ ರೋಗಿಗಳು (49%) ಜ್ವರವನ್ನು ಹೊಂದಿದ್ದರು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಿಂದ ಮಂಗಳವಾರ ಬಿಡುಗಡೆಯಾದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕೋವಿಡ್ ನಿಂದಾಗಿ ಹೈಪೋಕ್ಸಿಯಾ, ಥ್ರಂಬೋಟಿಕ್ ತೊಡಕುಗಳು ಅಥವಾ ಸ್ವಯಂ ನಿರೋಧಕ ಕಾರ್ಯವಿಧಾನಗಳ ಮೂಲಕ ನರವೈಜ್ಞಾನಿಕ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close