ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ
ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ
ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ ತಮ್ಮ ಊರಿನ ರಸ್ತೆ ಮಳೆಯಿಂದಾಗಿ ತುಂಬಾ ಹಾಳಾಗಿದೆ. ಓಡಾಡಲು ಆಗುತ್ತಿಲ್ಲ. ಮಳೆಗಾಲದಲ್ಲಿ
ತಮ್ಮ ಊರಿನ ರಸ್ತೆ ಮಳೆಯಿಂದಾಗಿ ತುಂಬಾ ಹಾಳಾಗಿದೆ. ಓಡಾಡಲು ಆಗುತ್ತಿಲ್ಲ. ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದು ಎಂದು ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ. ಚಿಕ್ಕಮಗಳೂರಿನ ಕೊಪ್ಪದ ಮಲಗಾರು ಶಾಲೆಯಲ್ಲಿ ಓದುತ್ತಿರುವ ಲೋಕನಾಥಪುರ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ. ಮಹಿಳೆಯರು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದು ಕನ್ನಡ-ಇಂಗ್ಲಿಷ್ ಎರಡರಲ್ಲೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಳೆ. |