ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೆ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರು ನಾಮಕರಣ ಮಾಡುವಂತೆ ಹೋರಾಟ ಆರಂಭವಾಗಿದೆ. ಜಗತ್ತಿನ ಎಲ್ಲಿಯೇ ಹೋದರು ದಕ್ಷಿಣ ಕನ್ನಡ ಜಿಲ್ಲೆಯವರನ್ನು ಮಂಗಳೂರಿನವರು ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರಿಡಬೇಕು ಎಂಬ ಒಂದು ವಾದವಿದ್ದರೆ ಮತ್ತೊಂದೆಡೆ ಕೋಮುಗಲಭೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಹಾಳಾಗಿದೆ. ಅಭಿವೃದ್ಧಿ ಕುಂಠಿತಗೊಂಡಿದೆ. ಇದನ್ನು ಮಂಗಳೂರು ಎಂದು ಹೆಸರಿಸಿದರೆ ಬದಲಾವಣೆ ಸಾಧ್ಯ ಎಂಬ ಆಗ್ರಹದಡಿ ಹೋರಾಟ ಆರಂಭಿಸಲಾಗಿದೆ.