ಸೇತುವೆ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಸೇತುವೆ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಪದ್ರಾ ಪಟ್ಟಣದ ಸಮೀಪವಿರುವ ಗಂಭೀರಾ ಗ್ರಾಮದ ಬಳಿ 40 ವರ್ಷಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ಹಲವು ವಾಹನಗಳು ನದಿಗೆ ಬಿದ್ದಿತ್ತು. ಈ ವೇಳೆ ನದಿಯಲ್ಲಿ 9 ಮಂದಿಯ ಮೃತ ದೇಹ ಪತ್ತೆಯಾಗಿತ್ತು.