ದಿನಕ್ಕೆ 16 ಬಾರಿ ಸೂರ್ಯೋದಯ-ಸೂರ್ಯಾಸ್ತ'
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಭಾಂಶು ಅವರೊಂದಿಗೆ ಮೇಘಾಲಯ ಮತ್ತು ಅಸ್ಸಾಂನ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಆಗ, ಬಾಹ್ಯಾಕಾಶದಲ್ಲಿ ಒಂದು ದಿನಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದಾಗಿ ಶುಭಾಂಶು ತಿಳಿಸಿದರು. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಬಲ ಇಲ್ಲದಿರುವುದರಿಂದ, ದೇಹದ ಸ್ನಾಯುಗಳು ಮತ್ತು ಮೂಳೆಗಳು ದುರ್ಬಲಗೊಳ್ಳುತ್ತವೆ. ಹಾಗಾಗಿ, ಪ್ರತಿದಿನ ಟ್ರೆಡ್ಮಿಲ್ ಮತ್ತು ಸೈಕ್ಲಿಂಗ್ ಯಂತ್ರಗಳಲ್ಲಿ ವ್ಯಾಯಾಮ ಮಾಡುವುದಾಗಿಯೂ ಅವರು ಹೇಳಿದರು

