Udupi-ಉಡುಪಿ ಹಾವಂಜೆ ಗ್ರಾಮದ ಕಾರ್ತಿಬೈಲು ರಸ್ತೆ ಕುಸಿತ ಗುಡ್ಡ ಕುಸಿತ ದುರಂತ ಸಂಭವ ತಪ್ಪಿಸಬೇಕಾಗಿದೆ!
webnews kannada
1 ಆಗ, 2024
webnews kannada
Udupi-ಉಡುಪಿ ಹಾವಂಜೆ ಗ್ರಾಮದ ಕಾರ್ತಿಬೈಲು ರಸ್ತೆ ಕುಸಿತ ಗುಡ್ಡ ಕುಸಿತ ದುರಂತ ಸಂಭವ ತಪ್ಪಿಸಬೇಕಾಗಿದೆ!
ಕಾರ್ತಿಬೈಲು ಸ್ಥಳಿಯರ ಸಂಕಷ್ಟ ಸುರಿಯುತ್ತಿರುವ ಬಾರಿ ಮಳೆಗೆ ಮಣ್ಣು ಕುಸಿತದಿಂದ ರಸ್ತೆ ಮಾಯವಾಗಿದೆ ರಸ್ತೆಯಲ್ಲಿ ನೀರು ಹರಿದು ರಸ್ತೆ ಕಾಣದಂತಹ ಪರಿಸ್ಥಿತಿಗೆ ಬಂದಿದೆ ಇದು ಸ್ಥಳೀಯ ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಈ ಭಾಗದ ವಿದ್ಯಾರ್ಥಿಗಳ ಶಾಲಾ ವಾಹನ ಈ ಮಾರ್ಗದಲ್ಲೇ ಚಲಿಸಬೇಕಾಗಿರುವುದರಿಂದ ಅದೆಷ್ಟು ಅಪಘಾತಗಳು ಈ ಮಾರ್ಗದಲ್ಲಿ ಸಂಭವಿಸುತ್ತಿದ್ದೆ

ಕಾರ್ತಿಬೈಲು ನಿವಾಸಿಗಳು ಕಳೆದ 19 ವರುಷಗಳಿಂದ ರಸ್ತೆ ದುರಸ್ತಿಗಾಗಿ ಸಂಭಂದಪಟ್ಟ ಗ್ರಾಮ ಪಂಚಾಯತಿಯಲ್ಲಿ ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದು ಯಾವ ಉಪಯೋಗ ಕೂಡ ಸ್ಥಳೀಯರಿಗೆ ದೊರಕುತ್ತಿಲ್ಲ ಮುಂದೆ ಈ ಭಾಗ ದೊಡ್ಡ ಮಟ್ಟದ ದುರಂತ ಕೂಡ ಸಂಭವಿಸಬಹುದು ಯಾಕೆಂದರೆ ಈ ರಸ್ತೆಯ ಕೆಳಭಾಗದಲ್ಲಿ 250 ಅಡಿ ಪ್ರಪಾತ ಕಣಿವೆ ಇದೆ ಎಂದು ಇಲ್ಲಿನ ಹಿರಿಯರು ಸಾರ್ವಜನಿಕರು ತಮ್ಮ ಕಾಳಜಿ ವ್ಯಕ್ತಪಡಿಸುತಿದ್ದಾರೆ

ಕೊಳಲಗಿರಿ ಎತ್ತರದ ಪ್ರದೇಶವಾಗಿದ್ದು ಪೂರ್ವದ ಭೌಗೋಳಿಕ ಭೂಮಿ ಮೃದು ಶೇಡಿ ಮಣ್ಣಾಗಿದ್ದು ನಿರಂತರ ಮಳೆಯಿಂದ ಬೆಟ್ಟ ಕುಸಿತವಾದರೆ ಕಾರ್ತಿಬೈಲು ಹಾಗು ಪ್ರಸಿದ್ಧ ಆರೂರು ಪ್ರದೇಶಕ್ಕೆ ಮಹಾ ದುರಂತ ಕಾದಿದೆ ಸ್ಥಳಿಯರ ಭೌಗೊಳಿಕ ಜ್ಞಾನ ಆಭಿಪ್ರಾಯ ಮನವಿಗಳಿಗೆ ಸ್ಪಂದಿಸದ ಅಧಿಕಾರಿಗಳು ಪರಿಸರ ವಿಕೋಪದಿಂದ ಮುಂದಿನ ದಿನಗಳಲ್ಲಿ ಸಂಭವಿಸುವಂತಹ ದುರ್ಘಟನೆ ಪ್ರಾಣಹಾನಿ ನಷ್ಟಗಳಿಗೆ ಜವಾಬ್ದಾರಿ ಹೊಣೆ ಹೊರಬೇಕಾಗಿದೆ! ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ.

(PMGSY) ಅನ್ನು ಸರ್ಕಾರವು ಪ್ರಾರಂಭಿಸಿದೆ. ಬಡತನದ ಭಾಗವಾಗಿ ಸಂಪರ್ಕವಿಲ್ಲದ ವಾಸಸ್ಥಳಗಳಿಗೆ ಸಂಪರ್ಕವನ್ನು ಒದಗಿಸಲು ಭಾರತ ಸರಕಾರ ಸ್ಪಂದಿಸುತ್ತಿದೆ. ಆದರೆ 19 ವರುಷಗಳಿಂದ ಇಲ್ಲಿನ ಸ್ಥಳಿಯರು ಸಲ್ಲಿಸಿದ್ದ ಅರ್ಜಿಗಳಿಗೆ ಯಾಕೆ ಆಡಳಿತ ಸ್ಪಂದಿಸಲಿಲ್ಲ? ಎಂಬುದೇ ಯಕ್ಷಪ್ರಶ್ನೆಯಾಗಿದೆ

