webnews kannada
BREAKING: ಶಿರಾಡಿ ಘಾಟ್ ಮತ್ತೆ ಭೂಕುಸಿತ
ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಶಿರಾಡಿ
ಘಾಟ್‌ನ ದೊಡ್ಡ ತಪ್ಪಲು ಎಂಬಲ್ಲಿ ಮತ್ತೆ ಭೂಕುಸಿತ
ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಸತ್ಯಭಾಮಾ ಮತ್ತು ಹಿರಿಯ ಅಧಿಕಾರಿಗಳು ಸ್ಥಳ
ಪರಿಶೀಲನೆ ನಡೆಸಿದ ಕೆಲವೇ ಹೊತ್ತಿನಲ್ಲಿ ಮತ್ತೆ ಭೂಕುಸಿತ
ಸಂಭವಿಸಿದ್ದು, ಮಣ್ಣಿನಡಿ ಒಂದು ಕಂಟೇನರ್ ಸಿಲುಕಿದೆ
ಎಂದು ವರದಿಯಾಗಿದೆ. ಹೀಗಾಗಿ ಶಿರಾಡಿ ಘಾಟ್‌ನಲ್ಲಿ
ಸಂಚಾರ ನಿರ್ಬಂಧಿಸಲಾಗಿದೆ. ಶಿರಾಡಿ ಘಾಟ್ ಮಂಗಳೂರು
ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಕರಾವಳಿ