webnews kannada
ನಡೂರು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ನೂತನ ಕಟ್ಟಡದ ರಚನೆಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ಮಂಜೂರಾತಿ ಪತ್ರ ವಿತರಿಸಲಾಯಿತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ಬ್ರಹ್ಮಾವರ ತಾಲೂಕು
ಸಮುದಾಯ ಅಭಿವೃದ್ಧಿ ವಿಭಾಗದಿಂದ ನಡೂರು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ನೂತನ ಕಟ್ಟಡದ ರಚನೆಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ರೂ.2,00,000/-ಮೊತ್ತದ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿಗಳಾದ ರಮೇಶ್ ಪಿ ಕೆ ಇವರು ಸಂಘದ ಅಧ್ಯಕ್ಷರ ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ವಿತರಿಸಲಾಯಿತು
ಈ ಸಂದರ್ಭದಲ್ಲಿ ನಡೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ, ನಡೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜಲಂಧರ್ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಪಾಂಡುರಂಗ ಶೆಟ್ಟಿ, ಬಾರ್ಕೂರು ವಲಯ ಮೇಲ್ವಿಚಾರಕ ರವೀಂದ್ರ ಎಸ್, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಪುಷ್ಪಲತಾ, ನಡೂರು ಸೇವಾ ಪ್ರತಿನಿಧಿ ಚೈತ್ರ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು
ಕರಾವಳಿ