Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

Bank holiday ಬ್ಯಾಂಕ್ ಗ್ರಾಹಕರಿಗೆ ಅಲರ್ಟ್‌; ಆಗಸ್ಟ್ ನಲ್ಲಿ ಬ್ಯಾಂಕ್ ರಜೆ ಎಷ್ಟು ಗೊತ್ತ

webnews kannada

Bank holiday ಬ್ಯಾಂಕ್ ಗ್ರಾಹಕರಿಗೆ ಅಲರ್ಟ್‌; ಆಗಸ್ಟ್ ನಲ್ಲಿ ಬ್ಯಾಂಕ್ ರಜೆ ಎಷ್ಟು  ಗೊತ್ತ 

Webnewskannada 
ಪೂರ್ಣ ಪಟ್ಟಿ ಇಲ್ಲಿದೆ Bank holidays: ಪ್ರತಿದಿನದ ಕೆಲಸ ಕಾರ್ಯವನ್ನು ಬಿಟ್ಟು ರಜೆ ಹಾಕಿ ಬ್ಯಾಂಕಿಗೆ ಹೋಗುತ್ತವೆ ಆ ದಿನ ರಜೆಯಾಗಿದ್ದರೆ ಸಮಯವು ವ್ಯರ್ಥ ಕೆಲಸ ವ್ಯರ್ಥ ಹಾಗಾಗಿ ಈ ಮಾಹಿತಿಯನ್ನ ನಿಮ್ಮವರಿಗೆ ಶೇರ್ ಮಾಡಿ. ನಿಮಗೆಲ್ಲಾ ಗೊತ್ತಿರುವ ಹಾಗೆ ಈ ವರ್ಷದ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2024ರ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 

ಆಗಸ್ಟ್ ತಿಂಗಳಲ್ಲಿ 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರಲಿವೆ. ಯಾವೆಲ್ಲ ದಿನ ಬ್ಯಾಂಕ್‌ ರಜೆ ಇರುತ್ತದೆ ಎಂಬ ಮಾಹಿತಿ ಇಲ್ಲಿದೆ. ಆದರೆ,ಆಗಸ್ಟ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯು ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರವನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

ಈ ರಜಾದಿನಗಳ ಪಟ್ಟಿಯಲ್ಲಿರುವ ಕೆಲವು ರಜಾದಿನಗಳು ಮಾತ್ರವೇ ದೇಶದ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತವೆ. ಇನ್ನು ಕೆಲವು ರಜಾದಿನಗಳು ಆಯಾ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ ಎಂಬುದನ್ನು ಬ್ಯಾಂಕ್ ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಆಗಸ್ಟ್‌ ತಿಂಗಳಲ್ಲಿ ನಿಮಗೆ ಅತಿ ಮುಖ್ಯವಾದ ಬ್ಯಾಂಕಿಂಗ್‌ ಕೆಲಸಗಳಿದ್ದರೆ, ರಜಾದಿನಗಳ ಪಟ್ಟಿಯನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಈ ಮಾಹಿತಿ ನೀಡಿದೆ ದೇಶದ ಬ್ಯಾಂಕ್‌ಗಳು ಪ್ರತಿ ತಿಂಗಳ ಮೊದಲ ಶನಿವಾರ, ಮೂರನೇ ಶನಿವಾರ ಮತ್ತು ಐದನೇ ಶನಿವಾರದಂದು ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತವೆ.

ಆದರೆ, 2ನೇ ಶನಿವಾರ ಮತ್ತು 4ನೇ ಶನಿವಾರದಂದು ಹಾಗೂ ಎಲ್ಲ ಭಾನುವಾರಗಳಂದು ರಜೆ ಇರುತ್ತದೆ. ಜುಲೈ 17ರಂದು BSE & NSE ಯಾವುದೇ ವಹಿವಾಟು ನಡೆಸುವುದಿಲ್ಲ! ಕಾರಣ ಏನು? ಮತ್ತೊಂದೆಡೆ, ರಜಾದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿದ್ದರೂ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ಸೇವೆಗಳು ಯಾವುದೇ ತೊಂದರೆಯಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಬ್ಯಾಂಕ್‌ಗಳು ತಿಳಿಸಿವೆ. ಅದೇ ರೀತಿ, ಬ್ಯಾಂಕ್ ಎಟಿಎಂಗಳು ಮತ್ತು ನಗದು ಠೇವಣಿ ಯಂತ್ರಗಳು ರಜಾದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತವೆ ಎಂದು ಬ್ಯಾಂಕ್‌ಗಳು ತಿಳಿಸಿವೆ. ಮಾಹಿತಿ ಇಷ್ಟವಾದರೆ ಶೇರ್ ಮಾಡಿ
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close