Kundapura ಯಡ್ತಾಡಿಯಲ್ಲಿ ವಿಶ್ವ ಕುಂದಾಪ್ರ ದಿನಾಚರಣೆಗೆ ಚಾಲನೆ.
ಕುಂದಾಪುರ : ಪ್ರತಿ ವರ್ಷದಂತೆ ಈ ಬಾರಿಯೂ
ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ
ದಿನಾಚರಣೆಗೆ ಆ.4 ರ ಭಾನುವಾರದಂದು
ಬಾರ್ಕೂರು ಸಮೀಪದ ಯಡ್ತಾಡಿಯಲ್ಲಿ
ಸಿನಿಮಾ ನಟ ದಿ.ಸುನೀಲ್ ಅವರ ಮನೆಯಲ್ಲಿ
ಅಧಿಕೃತ ಚಾಲನೆ ನೀಡುವ ಕಾರ್ಯಕ್ರಮ
ನಡೆಯಲಿದೆ ಎಂದು ಮೂಡುಗಿಳಿಯಾರು
ಜನಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
ಕುಂದಾಪ್ರ ಕನ್ನಡ ದಿನಾಚರಣೆಯನ್ನು
ಅರ್ಥಪೂರ್ಣವಾಗಿ ಆರಂಭಿಸುವ
ಉದ್ದೇಶದಿಂದ ಅಸಾಡಿ ಅಮಾಸಿಯ
ಭಾನುವಾರ ಬೆಳಿಗ್ಗೆ 10 ಗಂಟೆಗೆ ' ಹೋರಿಗೆ
( ಕೋಣ ) ಯೆರ್ಥ ಕೊಡುವ ' ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ರಾಜ್ಯೋತ್ಸವ ಕಂಬಳ ಪ್ರಶಸ್ತಿ ಪುರಸ್ಕೃತ
ಬಾರ್ಕೂರು ಶಾಂತಾರಾಮ ಶೆಟ್ಟಿಯವರು
ಯಜಮಾನ್ಕಿ ವಹಿಸಲಿದ್ದಾರೆ. ಕುಂದಾಪ್ರ
ಕನ್ನಡದ ವಾಗ್ಮಿ ಮನು ಹಂದಾಡಿ
ಕಾರ್ಯಕ್ರಮದ ಆಶಯದ ಕುರಿತು
ಮಾತನಾಡಲಿದ್ದಾರೆ. ಕುಂದಾಪ್ರ ಕನ್ನಡ
ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸುವಂತೆ ಪ್ರಕಟಣೆಯಲ್ಲಿ
ಕೋರಲಾಗಿದೆ.
ಕರಾವಳಿ