webnews kannada
lions club ಲಯನ್ಸ್ ಕ್ಲಬ್ ಬಾಕೂರು(Dist 317C, zoneI Region IV) ಇದರ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಲಯನ್ಸ್ ಕ್ಲಬ್ ಬಾಕೂರು(Dist 317C, zoneI Region IV)
ಇದರ 2024- 25 ನೇ ಸಾಲಿನ ನೂತನ
ಪದಾಧಿಕಾರಿಗಳ ಪದಗ್ರಹಣ
ಸಮಾರಂಭ
ಬ್ರಹ್ಮಾವರ ಸಿಟಿ ಸೆಂಟರ್ ಸಿಂಧೂರ ಸಭಾಂಗಣದಲ್ಲಿ ಜರಗಿತು
2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ Ln.ಶ್ರೀನಿವಾಸ್ ಶೆಟ್ಟಿ, ಕಾರ್ಯದರ್ಶಿ Ln.ಉದಯ್.ಎಸ್ ಶೆಟ್ಟಿ ಕೋಶಾಧಿಕಾರಿLn. ಸಂತೋಷ್ ಶೆಟ್ಟಿ ಹಾಗೂ ಇನ್ನಿತರ ಪದಾಧಿಕಾರಿಗಳಿಗೆ ಪದಗ್ರಹಣ ಅಧಿಕಾರಿಗಳಾದ Ln. ಸುನೀಲ್ ಕುಮಾರ್ ಶೆಟ್ಟಿ (past District chief co ordinator GLT 2023-24 )ಪದ ಪ್ರಧಾನ ಮಾಡಿದರು
ಈ ಸಂದರ್ಭದಲ್ಲಿ Ln ಪ್ರಕಾಶ್ ಶೆಟ್ಟಿ (ವಲಯ ಅಧ್ಯಕ್ಷರು, Ln ಹರೀಶ್ ಬೇಳಂಜೆ (ಪ್ರಾಂತೀಯ ಅಧ್ಯಕ್ಷರು ) ನಿಕಟಪೂರ್ವ ಅಧ್ಯಕ್ಷರಾದ Ln.ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯ ದರ್ಶಿ Ln.ಶ್ರೀನಿವಾಸ ಶೆಟ್ಟಿ,ಕೋಶಾಧಿಕಾರಿ ಯು. ಕೊಟ್ರಸ್ವಾಮಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ನೂತನ ಸದಸ್ಯರಾಗಿ ಸದಾಶಿವ ಹೆಗ್ಡೆ ಸೇರ್ಪಡೆಗೊಂಡರು
ನೇಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಬಾರ್ಕೂರು ಇಲ್ಲಿ 5 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಕುಟುಂಬದ ಮನೀಷ್ ಅವರ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಲಾಯಿತು

ಹಾಗೂ ಈ ಬಾರಿಯ 10ನೇ ತರಗತಿ ಪರೀಕ್ಷೆ ಯಲ್ಲಿ ಅತೀ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿದ ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಅಪೇಕ್ಷ ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು
ಶ್ರೀಯುತ ಶ್ರೀನಿವಾಸ್ ಶೆಟ್ಟಿ (ಅಧ್ಯಕ್ಷರು ), ಉದಯ್ ಎಸ್ ಶೆಟ್ಟಿ (ಕಾರ್ಯದರ್ಶಿ ) ಸಂತೋಷ್ ಶೆಟ್ಟಿ ( ಕೋಶಾಧಿಕಾರಿ )
ಸೇವೆಗಾಗಿ ನಾವು ಎಂಬ ಧ್ಯೇಯ ವಾಕ್ಯದೊಂದಿಗೆ ಇವರ ಅಧಿಕಾರವಧಿಯಲ್ಲಿ ಇನ್ನಷ್ಟು ಹೆಚ್ಚಿನ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲಯನ್ಸ್ ಕ್ಲಬ್ ಬಾರ್ಕೂರು ಜನ ಮನ್ನಣೆ ಪಡೆಯಲಿ ಎಂದು ಶುಭ ಹಾರೈಸುತ್ತೇವೆ
ಶ್ರೀಮತಿ ಶೈಲಜಾ ಪ್ರವೀಣ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು
ಕರಾವಳಿ