ತಂಗಿ ಮೇಲೆ rape ಅತ್ಯಾಚಾರ, ಕೊಲೆ, ಅಪರಾಧ ಮರೆಮಾಚಲು ತಾಯಿಯ ಬೆಂಬಲ News
webnews kannada
28 ಜುಲೈ, 2024
ತಂಗಿ ಮೇಲೆ ಅತ್ಯಾಚಾರ, ಕೊಲೆ, ಅಪರಾಧ ಮರೆಮಾಚಲು ತಾಯಿಯ ಬೆಂಬಲ News
webnewskannada | Updated By: webnewskannada
ತಂಗಿ ಮೇಲೆ ಅತ್ಯಾಚಾರ, ಕೊಲೆ, ಅಪರಾಧ ಮರೆಮಾಚಲು ತಾಯಿಯ ಬೆಂಬಲ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡಿ 9 ವರ್ಷದ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಈ ಕೃತ್ಯ ಮರೆ ಮಾಚಲು ಆತನ ತಾಯಿಯೇ ಸಹಾಯ ಮಾಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. hಈ ಘಟನೆಯನ್ನು ಮುಚ್ಚಿಡಲು ಆತನ ತಾಯಿ ಹಾಗೂ ಸಹೋದರಿ ಸಹಾಯ ಮಾಡಿದ್ದರು ಎಂದು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು 50 ಜನರ ವಿಚಾರಣೆ ನಡೆಸಿದ್ದಾರೆ, ಕೆಲವು ಸಾಕ್ಷ್ಯಾಧಾರ ಆಧಾರದ ಮೇಲೆ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.ಏಪ್ರಿಲ್ 24ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ 9 ವರ್ಷದ ಅಪ್ರಾಪ್ತ ಬಾಲಕಿಯ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ತಿಳಿದುಬಂದಿತ್ತು.

