ಇಬ್ಬರು ಬಾಲಕಿಯರು ಭಿಕ್ಷೆ ಬೇಡುತ್ತಾ ವಿದೇಶಿ ಪ್ರವಾಸಿಗರಿದ್ದ ಆಟೋಹತ್ತಿ 150 ಮೀಟರ್ನಷ್ಟು ದೂರ ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಬಾಲಕಿಯರು ನಡೆದುಕೊಂಡಿರುವ ರೀತಿಗೆ ವಿದೇಶಿ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದೆಹಲಿಯಲ್ಲಿ ಪ್ರವಾಸಿಗರು ಅಸುರಕ್ಷಿತರಾಗಿದ್ದಾರೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ .ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹೊರಬಿದ್ದಿದ್ದು ಅದರಲ್ಲಿ ಮನೆ, ಗೊತ್ತುಗುರಿ ಇಲ್ಲದ ಇಬ್ಬರು ಬಾಲಕಿಯರು ವಿದೇಶಿ ಪ್ರವಾಸಿಗರಿದ್ದ ಇ-ಆಟೋವನ್ನು ಹತ್ತಿ ಸುಮಾರು 150 ಮೀಟರ್ ದೂರ ಹೋಗಿದ್ದಾರೆ. ದಾರಿಹೋಕರು ಇದನ್ನು ಖಂಡಿಸಿದರು ಸಹ ಅದನ್ನು ಲೆಕ್ಕಕ್ಕೆ ಹಾಕಿಕೊಳ್ಳದೆ ಇಬ್ಬರು ಬಾಲಕಿಯರು ಅವರಿಗೆ ಹಣ ಕೊಡುವಂತೆ ಪೀಡಿಸಿದ್ದಾರೆ..ಅವರು ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ, ಒಬ್ಬಳು ಆಟೋ ಹತ್ತಿಕೊಂಡಿದ್ದರೆ ಇನ್ನೊಬ್ಬಳು ಕೂಡ ಆಟೋ ಹತ್ತಲು ಪ್ರಯತ್ನಿಸುತ್ತಿದ್ದುದು ಕಂಡುಬಂದಿತ್ತು. ಹಣ ಕೊಡುವುದಿಲ್ಲ ಎಂದ ಮೇಲೂ ಅವರನ್ನು ಪೀಡಿಸಿದ್ದಾರೆ.
Webnews kannada
Webnews kannada 2
Webnews kannada-3
WebNews kannada- 4
ಒಳ ಪೋಸ್ಟ್ -5
Popular Posts
ಕಾರ್ಕಡ-ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ-karavalivani
11 ಜುಲೈ, 2022
ಅಮ್ಮನ ಅನಾರೋಗ್ಯ. ಆರ್ಥಿಕ ಸಹಾಯ ಮಾಡುವಂತೆ ಮಗನ ಮನವಿ
10 ಆಗ, 2022
ಕೋಟ ಠಾಣೆಗೆ ನೂತನ ಪಿ ಎಸ್ ಐ ಮಧು.ಬಿ-karavalivani
8 ಜನ, 2022

