ಇಂದು ವಾಯುಭಾರ ಕುಸಿತ ಪಕ್ಕಾ: ಕರ್ನಾಟಕದಲ್ಲಿ ಜುಲೈ 21ರವರೆಗೆ ಅತ್ಯಧಿಕ ಮಳೆ: ಹವಾಮಾನ ತಜ್ಞ CS ಪಾಟೀಲ್
webnews kannada
20 ಜುಲೈ, 2024
ಇಂದು ವಾಯುಭಾರ ಕುಸಿತ ಪಕ್ಕಾ: ಕರ್ನಾಟಕದಲ್ಲಿ ಜುಲೈ 21ರವರೆಗೆ ಅತ್ಯಧಿಕ ಮಳೆ: ಹವಾಮಾನ ತಜ್ಞ CS ಪಾಟೀಲ್
ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ಇನ್ನಿಲ್ಲದಂತೆ ಆರ್ಭಟ ಶುರುವಿಟ್ಟುಕೊಂಡಿದೆ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯಲ್ಲಿ ಈ ಮಳೆ ಇನ್ನೂ 05 ದಿನ ಮುಂದುವರಿಯಲಿದೆ. ಹಲವು ಜಿಲ್ಲೆಗಳಿಗೆ ಭರ್ಜರಿ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸ್ಟ್ರಫ್, ಸುಳಿಗಾಳಿಯ ವೈಪರಿತ್ಯವು ತೀವ್ರಗೊಂಡಿದೆ. ಇದರ ಜೊತೆಗೆ ಬಂಗಾಳಕೊಳ್ಳಿಯಲ್ಲಿನ ಸಮುದ್ರ ಮೇಲ್ಮೈ ಸುಳಿಗಾಳಿ ಪ್ರಭಾವ ಹೆಚ್ಚಾಗಿದ್ದು, ನಾಳೆ ಅಂದರೆ ಶುಕ್ರವಾರ (ಜುಲೈ 12) ವಾಯುಭಾರ ಕುಸಿತಗೊಳ್ಳುವುದು ಬಹುತೇಕ ಖಚಿತ ಎಂದು ಹವಾಮಾನ ಇಲಾಖೆ ಬೆಂಗಳೂರಿನ ವಿಜ್ಞಾನ ಡಾ.ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ