Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

Viral Video: ಫೋಟೋ ಶೂಟ್‌ ವೇಳೆ ಬಂದ ರೈಲು, ಪ್ರಾಣ ಉಳಿಸಿಕೊಳ್ಳಲು ಕಂದಕಕ್ಕೆ ಹಾರಿದ ದಂಪತಿ; ವಿಡಿಯೋ ವೈರಲ್‌

 


Viral Video: ಫೋಟೋ ಶೂಟ್‌ ಮಾಡಲು ಹೋಗಿ  ಕಂದಕಕ್ಕೆ ಹಾರಿದ ದಂಪತಿ; ವಿಡಿಯೋ ವೈರಲ್‌

ಕೆಲವರಿಗೆ ಸೆಲ್ಫಿ ಹುಚ್ಚು ಎಷ್ಟರ ಮಟ್ಟಗೆ ಬೆಳೆದಿರುತ್ತೆ ಎಂದರೆ ಎಂತಹ ಪರಿಸ್ಥಿತಿ ಇದ್ದರೂ ಅಲ್ಲಿ ಸೆಲ್ಫಿ ತೆಗೆಯಲು ರೆಡಿಯಾಗಿರುತ್ತಾರೆ ಆದರೆ ಅದರಿಂದ ನಮ್ಮ ಪ್ರಾಣಕ್ಕೆ ಅಪಾಯ ಇದೆ ಎಂದು ಅವರಿಗೆ ತಿಳಿಯುವುದೇ ಇಲ್ಲ ಅಂತದ್ದೊಂದು ಘಟನೆ ಇಲ್ಲಿ ಸಹ ನಡೆದಿದೆ  ಕೆಲವರಂತೂ ತುಂಬಿ ಹರಿಯುವ ನದಿ, ಜಲಪಾತ ಮುಂತಾದ ಅಪಾಯಕಾರಿ ಸ್ಥಳಗಳಿಗೆ ಹೋಗಿ ಫೋಟೋ ಶೂಟ್‌ ಮಾಡಿಸಿಕೊಳ್ಳುತ್ತಾರೆ. ಹೀಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಘಟನೆಗಳು ನಡೆದಿವೆ.  ದಂಪತಿಗಳಿಬ್ಬರು ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ, ಇದ್ದಕ್ಕಿದ್ದಂತೆ ರೈಲು ಬಂದಿದ್ದು, ಪ್ರಾಣ ಉಳಿದರೆ ಸಾಕೆಂದು ಈ ದಂಪತಿ 90 ಅಡಿ ಕಂದಕಕ್ಕೆ ಹಾರಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ಈ ಘಟನೆ ರಾಜಸ್ಥಾನದ ಪಾಲಿ ಎಂಬಲ್ಲಿ ನಡೆದಿದ್ದು, ಇಲ್ಲಿನ ಗೋರ್ಮಾಘಾರ್‌ ರೈಲು ಸೇತುವೆಯ ಮೇಲೆ ದಂಪತಿಗಳಿಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಇದ್ದಕ್ಕಿದ್ದಂತೆ ರೈಲು ಬಂದಿದ್ದು, ಈ ಅಪಾಯದಿಂದ ತಪ್ಪಿಸಿಕೊಳ್ಳಲು ದಂಪತಿ 90 ಅಡಿ ಆಳದ ಕಂದಕಕ್ಕೆ ಜಿಗಿದಿದ್ದಾರೆ. ಈ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ, 


 
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close