ಶಿಕ್ಷಕಿ ಕೊಲೆಗೆ ಕಾರಣವೇನು? ಮಾಹಿತಿ ಬಿಚ್ಚಿಟ್ಟ ಎಸ್ಪಿ
ಶಿಕ್ಷಕಿ ಕೊಲೆಗೆ ಕಾರಣವೇನು? ಮಾಹಿತಿ ಬಿಚ್ಚಿಟ್ಟ ಎಸ್ಪಿ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಎರಡು ವರ್ಷದಿಂದ ದೀಪಿಕಾ ಜತೆ ಅನ್ಯೋನ್ಯವಾಗಿದ್ದ ನಿತೇಶ್ ಎಂಬಾತನೇ ಕೊಲೆಗಾರ ಎಂದು ತಿಂದುಬಂದಿದೆ.

Updated on: nov 00, 2023
ಮಂಡ್ಯ, (ಜನವರಿ 24): ಜಿಲ್ಲೆಯ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ (Melukote Teacher) ಮಾಣಿಕ್ಯನ ಹಳ್ಳಿಯ ದೀಪಿಕಾ (Teacher Deepika) ಕೊಲೆ ಪ್ರಕರಣಕ್ಕೆ (Deepika Murder Case) ಸಂಬಂಧಿಸಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನಿತೇಶ್ ಹೊಸಪೇಟೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ದೀಪಿಕಾಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು. ಕೊಲೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಎಸ್ ಪಿ ದೀಪಿಕಾ ಹಾಗೂ ನಿತೇಶ್ ನಡುವೆ ವರ್ಷದಿಂದ ಸ್ನೇಹ ಇತ್ತು. ದಿನ ನಿತ್ಯ ಕಾಲ್, ಮೆಸೇಜ್ ಚಾಟ್ ನಲ್ಲಿ ಇಬ್ಬರು ನಿರತರಾಗುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಇತ್ತು. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ಆಗುತ್ತಿತ್ತು. ನಾನು ಭೇಟಿ ಮಾಡು ಎಂದಾಗ ದೀಪಿಕಾ ಸಿಗುತ್ತಿರಲಿಲ್ಲ. ಆದ್ರೆ ಆಕೆ ಕರೆದಾಗ ನಿತೀಶ್ ಹೋಗಲೇ ಬೇಕಿತ್ತು. ಇದರಿಂದ ಆಕೆಯ ಬಗ್ಗೆ ನಿತೀಶ್ ಗೆ ಮನಸ್ತಾಪ ಇತ್ತಂತೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಪ್ಲಾನ್ ಮಾಡಿಕೊಂಡಿದ್ದ ನಿತೀಶ್, ಜನವರಿ 20 ರಂದು ಮೀಟ್ ಮಾಡಲು ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ ಬರುವಂತೆ ದೀಪಿಕಾಗೆ ಹೇಳಿದ್ದ. ಅಲ್ಲದೇ ದೀಪಿಕಾ ಬೆಟ್ಟದ ತಪ್ಪಲಿಗೆ ಬರುವ ಮುನ್ನವೇ ಹೂತು ಹಾಕಲು ಗುಂಡಿ ಸಹ ತೆಗೆದಿದ್ದ ಎಂದು ವಿವರಿಸಿದರು..

