ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ ರೈತ webnews kannada
ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ ರೈತ webnews kannada
ರಾಮ ಬಗ್ಗೆ ಭಕ್ತಿಯ ಪರಾಕಾಷ್ಠೆ ಮೆರೆದ ರೈತರೊಬ್ಬರು ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ (Ayodhya Ram Mandir) ದೇಣಿಗೆ ನೀಡಿದ ಅಪರೂಪದ ವಿದ್ಯಮಾನ ರಾಯಚೂರು ಜಿಲ್ಲೆಯಿಂದ ವರದಿಯಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗೋಮರ್ಸಿ ಗ್ರಾಮದ ರೈತ ಸಣ್ಣ ಕರಿಯಪ್ಪ ಎಂಬವರೇ ಜೋಳ ಮಾರಿ ರಾಮ ಮಂದಿರಕ್ಕೆ ದೇಣಿಗೆ ನೀಡಿದವರು.
WEBNEWSKANNADA
WebNewsKannada |
Updated on: januc january
24, 202450 ಚೀಲ ಜೋಳ ಮಾರಾಟ ಮಾಡಿದ ಸಣ್ಣ ಕರಿಯಪ್ಪ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ 91,870 ರೂ. ಜಮೆ ಮಾಡಿದ್ದಾರೆ. ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಸಣ್ಣ ಕರಿಯಪ್ಪ ಅವರು ಮೂರು ಎಕರೆಯಲ್ಲಿ ಪ್ರತಿ ವರ್ಷ 120 ಚೀಲ ಜೋಳ ಬೆಳೆಯುತ್ತಿದ್ದರು. ಆದರೆ, ಈ ಬಾರಿ ಬರದಿಂದಾಗಿ ಕೇವಲ 80 ಚೀಲ ಜೋಳ ಬೆಳೆದಿದ್ದರು. ಅದರಲ್ಲಿ 50 ಚೀಲ ಮಾರಾಟ ಮಾಡಿ ದೇಣಿಗೆ ನೀಡಿದ್ದಾರೆ. ಅಯೋಧ್ಯೆಯ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಬಹಳಷ್ಟು ನಂಟು ಇವೆ. ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮ ಲಲ್ಲಾ ಮೂರ್ತಿಯನ್ನು ಕೆತ್ತಿರುವ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್. ಅದೇ ರೀತಿ ಕರ್ನಾಟಕ ವಿವಿಧ ಜಿಲ್ಲೆಗಳ ಅನೇಕ ಶಿಲ್ಪಿಗಳು ಅಯೋಧ್ಯೆಯ ರಾಮ ಮಂದಿರದಲ್ಲಿ ಕೆತ್ತನೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ ಇದೀಗ ರಾಯಚೂರಿನ ರೈತ ಸಣ್ಣ ಕರಿಯಪ್ಪ ಕೂಡ ಗಮನ ಸೆಳೆದಿದ್ದಾರೆ. .

