Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆ ಯುವಜನತೆಯ ಭವಿಷ್ಯ ನಿರ್ಮಿಸುತ್ತಿದೆ ರಾಜೇಶ್ ದೇವಾಡಿಗ karavalivani news

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆ ಯುವಜನತೆಯ ಭವಿಷ್ಯ ನಿರ್ಮಿಸುತ್ತಿದೆ  ರಾಜೇಶ್ ದೇವಾಡಿಗ karavalivani news

 |

 

Updated on: Sep 14, 2023 | 

karavalivani news
karavalivani news

Karavalivani News :  ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುವ ಈ ರುಡ್ ಸೆಟ್ ಸಂಸ್ಥೆಯಲ್ಲಿ ನಾಡಿನ ಯುವಕರಿಗೆ  ಭವಿಷ್ಯವನ್ನು ರೂಪಿಸಿಕೊಳ್ಳಲು ಭದ್ರ ಬುನಾದಿ ಹಾಕಿಕೊಡುತ್ತಿದೆ. ಇಂದಿ‌ನ ಮತ್ತು ಮುಂದಿನ ಜೀವನಕ್ಕೆ ಅನುಕೂಲವಾಗುವಂತಹ ತರಬೇತಿಯನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು  ಬ್ರಹ್ಮಾವರ *ಅವಿರಾಗ್ ಸ್ಟುಡಿಯೋ ಇದರ ಮಾಲಕರು, ರುಡ್ ಸೆಟ್  ಆಸರೆ  ಸಂಘಟನೆಯ ಗೌರವ ಅಧ್ಯಕ್ಷರು,  ರೋಟರಿ ಕ್ಲಬ್ ನ ಸದಸ್ಯರಾದ  ರೋಟರಿಯನ್  ರಾಜೇಶ್ ದೇವಾಡಿಗ ಅಭಿಪ್ರಾಯ ಪಟ್ಟರು.

ಅವರು ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ 30ದಿನ‌ ನಡೆಯುವ ಉಡುಪಿ ಜಿಲ್ಲಾ ಪಂಚಾಯತ್ ನ ಎನ್. ಆರ್.ಎಲ್. ಎಂ. ಘಟಕದ ವತಿಯಿಂದ ಸಂಜೀವಿನಿ ಸ್ವ ಸಹಾಯ ಸಂಘಗಳ ಮಹಿಳೆಯರಿಗಾಗಿ ನಡೆಯವ ವಾಹನ ಚಾಲನಾ ತರಬೇತಿ ಮತ್ತು 13 ದಿನಗಳ ನಡೆಯುವ ಸಿ.ಸಿ ಅಳವಡಿಕೆ ಮತ್ತು ಸರ್ವೀಸ್ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಾಹನ ಚಾಲನೆ ಯ ವೃತ್ತಿಯಲ್ಲಿ ಮಹಿಳೆಯರಿಗೆ ವಿಶೇಷ ವಾದ ಗೌರವ ಇರುತ್ತದೆ ಎಂದು ತಿಳಿಸಿದರು. ಸಿಸಿ ಕ್ಯಾಮರಾ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಆದುರಿಂದ ಎರಡು ತರಬೇತಿಗಳು ಭಾಗವಹಿಸಿದವರಿಗೆ  ಹೆಚ್ವಿನ ಅನುಕೂಲ ವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಈ ತರಬೇತಿ ಕಾರ್ಯಕ್ರಮ ವನ್ನು ಉಡುಪಿ ಜಿಲ್ಲಾ ಪಂಚಾಯತ್ ನ ಎನ್ ಆರ್. ಎಲ್.‌ಎಂ. ಘಟಕದ‌ ವೃತ್ತಿ ಪರತೆ ವಿಭಾಗದ ಸಂಯೋಜಕರಾದ ಶ್ರೀ ಶಮಂತ್ ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಇರುವ ಸ್ವಚ್ಚತಾ ಅಭಿಯಾನದ ವಾಹನ‌ಗಳ ಚಾಲನೆ ನಡೆಸಲು ಅನುಕೂಲವಾಗುವಂತೆ ಈ ತರಬೇತಿ ಇರುತ್ತದೆ ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ವೊಲಟ್ರಾನ್ ಟೆಕ್ನಾಲಜೀಸ್  ಪ್ರೈವೇಟ್ ಲಿಮಿಟೆಡ್ ಮಾಲಕರಾದ ಶ್ರೀ ಪ್ರಜ್ವಲ್ ಅವರು ಮಾತನಾಡಿ ವರ್ತಮಾನಕ್ಕೆ ಬೇಕಾದ ತರಬೇತಿಯನ್ನು ರುಡ್ ಸೆಟ್ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಕೆನರಾ ಬ್ಯಾಂಕಿನವರು ಉಚಿತವಾಗಿ ನೀಡುತ್ತಿರುವ ಮಹತ್ವದ ಕಾರ್ಯ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ  ಲಕ್ಷ್ಮೀಶ ಎ.ಜಿ  ಮಾತನಾಡಿ ತರಬೇತಿಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಎಂದರು.


ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ *ಕೆ.ಕರುಣಾಕರ ಜೈನ್  ಸ್ವಾಗತಿಸಿ, ತರಬೇತಿ ಯ ಮನ್ನೋಟ ವನ್ನು ನೀಡಿ, ಕಾರ್ಯಕ್ರಮ  ನಿರೂಪಿಸಿದರು. ಸಂಸ್ಥೆಯ ಉಪನ್ಯಾಸಕರಾದವ ಸಂತೋಷ ಶೆಟ್ಟಿ ಯವರು  ಧನ್ಯವಾದ ಸಲ್ಲಿಸಿದರು 


Kalyanpur Cement Kalyanpur Cement Kalyanpur Cement Kalyanpur Cement Kalyanpur Cement
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close