Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಗಣಪತಿ ಮೂರ್ತಿ ಮನೆಗೆ ತಂದು ಪೂಜೆ ಮಾಡೋದಾದರೆ ಈ ವಿಷಯ ನೆನಪಿಡಿ : karavalivani news

ಗಣಪತಿ  ಮೂರ್ತಿ  ಮನೆಗೆ ತಂದು  ಪೂಜೆ ಮಾಡೋದಾದರೆ  ಈ ವಿಷಯ ನೆನಪಿಡಿ 

 |

 

Updated on: Sep 00, 2023 | 

karavalivani news
karavalivani news

ಕರಾವಳಿವಣಿ ನ್ಯೂಸ್=  ಗಣೇಶಾ  ಹಬ್ಬ  ಬಂತು ಎಲ್ಲ ಮನೆಗಳಲ್ಲೂ ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸುವ ಪರಿಪಾಠ ಇಲ್ಲ. ಚಿಕ್ಕ ಮಕ್ಕಳಿರುವ ಕಡೆ ಗಣೇಶ ಮೂರ್ತಿಯನ್ನು ತರುವವರೂ ಇದ್ದಾರೆ. ಸಾಮಾನ್ಯವಾಗಿ ಗಣೇಶ ಮೂರ್ತಿಯನ್ನು ಇಲಿ ಪಂಚಮಿಯಂದು ವಿಸರ್ಜನೆ ಮಾಡಲಾಗುತ್ತದೆ. ಹಬ್ಬದ ದಿನವೇ ಗಣೇಶ ಬಪ್ಪಾನನ್ನು ಕಳುಹಿಸುವ ಪದ್ಧತಿಯೂ ಇದೆ. ನಾಲ್ಕು, ಹತ್ತು ದಿನಗಳ ಕಾಲ ಇಟ್ಟು ಪೂಜಿಸುವುದು ಸಹ ಸಾಮಾನ್ಯ. 

ಗಣೇಶ ಮೂರ್ತಿಯನ್ನು (Ganesha Idol) ಮನೆಗೆ ತರುವಾಗ, ಮನೆಯಲ್ಲಿ ಪೂಜಿಸುವಾಗ ಕೆಲವು ಪದ್ಧತಿಗಳನ್ನು ಅನುಸರಿಸಬೇಕು. ಅದರಿಂದ ಆ ಮನೆಗೆ ಶ್ರೇಯಸ್ಸಾಗುತ್ತದೆ ಎನ್ನಲಾಗುತ್ತದೆ. ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸುವವರು (Worship) ನೀವಾಗಿದ್ದರೆ ಕೆಲವು ನಿಯಮಗಳನ್ನು (Rules) ಅನುಸರಿಸಲು ಮರೆಯಬೇಡಿ

ಅನುಸರಿಸಬೇಕಾದ ಪದ್ಧತಿ ಈ ಕೆಳಗಿನಂತಿದೆ 
•    ಗಣೇಶ ಮೂರ್ತಿ ಮುಕುಟ ಅಥವಾ ಕಿರೀಟವಿಲ್ಲದೇ (Crown) ಅಪೂರ್ಣ. ಹೀಗಾಗಿ, ಕಿರೀಟವಿಲ್ಲದ ಗಣೇಶನ ಮೂರ್ತಿಯನ್ನು ಖರೀದಿಸಬೇಡಿ. ಮುಕುಟವು ಉತ್ತಮ ಅದೃಷ್ಟ (Luck) ತರುತ್ತದೆ ಎಂದು ಭಾವಿಸಲಾಗುತ್ತದೆ. 
•    ಗಣೇಶನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಅಥವಾ ಮಾರುಕಟ್ಟೆಯಿಂದಾದರೂ ತನ್ನಿ, ಯಾರಿಗಾದರೂ ಆರ್ಡರ್‌ ಕೊಟ್ಟಾದರೂ ಮಾಡಿಸಿ. ಆದರೆ, ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಗಣೇಶ ಮೂರ್ತಿಯೊಂದಿಗೆ ಇಲಿ (Mouse) ಹಾಗೂ ಕೆಲವು ಮೋದಕಗಳು (Modak) ಇರಬೇಕು. ಇದರಿಂದಾಗಿ ಮನೆಗೆ ಧನಾತ್ಮಕ ಶಕ್ತಿ (Positive Energy) ಲಭಿಸುತ್ತ •    ಮನೆಗೆ ಗಣೇಶ ಮೂರ್ತಿಯನ್ನು ತರುವಾಗ ಕೆಂಪು ಬಣ್ಣದ ಬಟ್ಟೆಯಿಂದ (Red Color Cloth) ಮುಚ್ಚಿಕೊಂಡು ತನ್ನಿ.

•    ಗಣೇಶ ಮೂರ್ತಿಯನ್ನು ಸ್ಥಾಪಿಸುವ ದಿಕ್ಕಿನ (Direction) ಬಗ್ಗೆ ಗಮನವಿರಲಿ. ಪೂರ್ವ (East), ಪಶ್ವಿಮ (West) ಅಥವಾ ಈಶಾನ್ಯ (North-East) ದಿಕ್ಕು ಇದಕ್ಕೆ ಪ್ರಶಸ್ತ. 
•    ಗಣೇಶನನ್ನು ಪೂಜಿಸುವಾಗ ಯಾವಾಗಲೂ ಗಂಟೆ (Bell), ಶಂಖ (Shankha), ಜಾಗಟೆಯ ನಾದವಿರಲಿ. ಹಬ್ಬದ ವೈಬ್ರೇಷನ್‌ (Vibration) ಇರಲೇಬೇಕು. 
•    1,2,4,5,7,10 ದಿನಗಳವರೆಗೂ ಇಟ್ಟು ಪೂಜಿಸಬಹುದು. ಪ್ರತಿದಿನವೂ ನೈವೇದ್ಯಕ್ಕೆಂದು ಏನಾದರೊಂದು ವಿಶೇಷ ತಿನಿಸನ್ನು ಮಾಡಬೇಕು. 

ಈ ಸಮಯದಲ್ಲಿ ಮಾಡಬಾರದ ಕೆಲಸಗಳ ಪಟ್ಟಿ 
•    ಸಾಮಾನ್ಯವಾಗಿ ಗಣೇಶ ಮೂರ್ತಿಯ ಸೊಂಡಿಲು (Trunk) ಎಡಕ್ಕೆ ಚಾಚಿಕೊಂಡಿರುವುದನ್ನು ನೋಡಿರಬಹುದು. ಮನೆಯಲ್ಲಿ ಪೂಜಿಸುವ ಗಣೇಶ ಮೂರ್ತಿ ಸಹ ಎಡಕ್ಕೇ ಸೊಂಡಿಲನ್ನು ಹೊಂದಿರಬೇಕು. ಬಲಕ್ಕೆ ಸೊಂಡಿಲು ಹೊಂದಿರುವ ಗಣೇಶ ಹಠಮಾರಿತನಕ್ಕೆ (Stubborn) ಹೆಸರು. ಅದನ್ನಿಟ್ಟು ಪೂಜಿಸಲು ತುಂಬ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎನ್ನಲಾಗುತ್ತದೆ. ಎಡಕ್ಕೆ ಚಾಚಿರುವ ಸೊಂಡಿಲು ಯಶಸ್ಸು (Success) ಮತ್ತು ಧನಾತ್ಮಕತೆಯನ್ನು ಬಿಂಬಿಸುತ್ತದೆ. •    ಗಣೇಶ ಮೂರ್ತಿ ಮನೆಯಲ್ಲಿರುವಾಗ ಮನೆಯನ್ನು ಖಾಲಿ (Empty) ಬಿಡಬಾರದು ಎನ್ನಲಾಗುತ್ತದೆ. ಯಾರಾದರೂ ಒಬ್ಬರಾದರೂ ಮನೆಯಲ್ಲಿರಬೇಕು. ಮೂರ್ತಿಯನ್ನು ಪೂಜಿಸದೇ ಇರಬಾರದು.

•    ಪೂಜೆ ಮಾಡದೆ, ಆರತಿ ಬೆಳಗದೆ ಗಣೇಶ ಮೂರ್ತಿಯನ್ನು ವಿಸರ್ಜಿಸಬಾರದು. ವಿಸರ್ಜನೆ ಪ್ರಕ್ರಿಯೆ ಮುಗಿಸಿದ ಬಳಿಕವೇ ನೀರಿನಲ್ಲಿ (Water) ಮುಳುಗಿಸಬೇಕು.
•    ಗಣೇಶ ಮೂರ್ತಿ ಮನೆಯಲ್ಲಿರುವ ಸಮಯದಲ್ಲಿ ಈರುಳ್ಳಿ (Onion), ಬೆಳ್ಳುಳ್ಳಿ (Garlic) ಸೇರಿದಂತೆ ಕೆಲವು ತಾಮಸ ಆಹಾರಗಳನ್ನು ಸೇವಿಸುವುದು ನಿಷಿದ್ಧ. ಸಾತ್ವಿಕ ಆಹಾರ ಸೇವನೆ ಮಾಡಬೇಕು. ದಿನವೂ ಅನ್ನ, ಸಿಹಿ ತಿನಿಸು, ಕರಿದ ತಿಂಡಿಗಳ ನೈವೇದ್ಯ ಮಾಡಬೇಕು.
 


Kalyanpur Cement Kalyanpur Cement Kalyanpur Cement Kalyanpur Cement Kalyanpur Cement
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close