Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ Cobra ನಾಗರಹಾವು!

ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು


karavalivani news

 |


Updated on: Sep 00, 2023 | 

ಪ್ರಾಣಿಗಳಿಗೆ ನಾವು ಯಾವುದೇ ತೊಂದರೆ ನೀಡದಿದ್ದರೆ ಅವು ಮನುಷ್ಯರಿಗೆ ಯಾವ ಅಪಾಯವನ್ನೂ ಮಾಡುವುದಿಲ್ಲ. ಆದರೆ, ಮನುಷ್ಯ ಆ ಪ್ರಾಣಿಗಳನ್ನು ಕೆಣಕಲು ಹೋದಾಗ ಅವು ತಿರುಗಿಬೀಳುವುದು ಸಾಮಾನ್ಯ. ಊರೊಳಗೆ ಬಂದ ಹಾವುಗಳನ್ನು

ಹಿಡಿದು ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ವಿಡಿಯೋಗಾಗಿ ನಾಗರ ಹಾವೊಂದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆಗ ಆ ಹಾವು ಆತನಿಗೆ ಸರ್​ಪ್ರೈಸ್ ಗಿಫ್ಟ್​ ಕೊಟ್ಟು ಕಳುಹಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಊರೊಳಗೆ ಹರಿದಾಡುತ್ತಿದ್ದ ನಾಗರಹಾವನ್ನು ಹಿಡಿಯಲು ಹೋದ ಯುವಕ ಆ ಹಾವಿನ ತಲೆಗೆ ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಆಗ ರೊಚ್ಚಿಗೆದ್ದ ಹಾವು ತಕ್ಷಣ ಹಿಂದೆ ತಿರುಗಿ ಆ ಯುವಕನ ತುಟಿಗೆ ಕಚ್ಚಿದೆ. ಈ ವೀಡಿಯೋ ವೀಕ್ಷಕರನ್ನು

ಬೆರಗುಗೊಳಿಸಿದೆ ಮತ್ತು ಕಳವಳವನ್ನುಂಟು ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಈ ಘಟನೆ

ಯಾವಾಗ ನಡೆದಿದೆ ಎಂಬುದು ಖಚಿತವಾಗಿ ತಿಳಿದಿಲ್ಲ. ಇದು ಎಲ್ಲಿ ಚಿತ್ರೀಕರಿಸಿದ್ದು ಎಂಬುದು ಕೂಡ ತಿಳಿದಿಲ್ಲ. ಆದರೆ, ನೆಟ್ಟಿಗರು ಆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಕೊನೆಯ ಲಿಪ್ ಕಿಸ್ ಅನ್ನು ಬಹಳ ಎಂಜಾಯ್ ಮಾಡಿದ್ದೀಯ ಎನಿಸುತ್ತಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ

ವಿಡಿಯೋ ನೋಡಲು ಕ್ಲಿಕ್ ಮಾಡಿ

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close