Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಮೊಗವೀರ(Mogaveer) ಯುವ ಸಂಘ ಹಾಗೂ ಮಹಿಳಾ ಸಂಘಟನೆ(Women's organization) ಸಾಲಿಗ್ರಾಮ ಇದರ ವಾರ್ಷಿಕ ಮಹಾಸಭೆ-Karavalivani


@karavalivani, @ಕರಾವಳಿವಾಣಿ
 
ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಾಪ್ರದಾನ ಕಾರ್ಯಕ್ರಮ ಭಾನುವಾರ ಕರಾವಳಿ ಮೊಗವೀರ ಸಭಾಭವನ ಸಾಲಿಗ್ರಾಮ ಇಲ್ಲಿ ಜರುಗಿತು.ಸಮಾರಂಭದ ಅಧ್ಯಕ್ಷತೆಯನ್ನು ಘಟಕದ

ಅಧ್ಯಕ್ಷ ಚಂದ್ರ ಬಂಗೇರ ವಹಿಸಿದ್ದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.
ಯುವ ಸಂಘಟನೆಯ ನೂತನ ಅಧ್ಯಕ್ಷರಾಗಿ ಕಿರಣ್ ಕುಂದರ್ ನೂತನ ಕಾರ್ಯದರ್ಶಿ ಪ್ರವೀಣ್ ಕುಂದರ್ ,ಮಹಿಳಾ ನೂತನ ಅಧ್ಯಕ್ಷ ಶಾಲಿನಿ ವಿಜಯಕಾಂಚನ್ ,ನೂತನ ಕಾರ್ಯದರ್ಶಿ ಸೌಜನ್ಯ ಅಧಿಕಾರ ಸ್ವೀಕರಿಸಿದರು.ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡ್ಕ ಪ್ರತಿಜ್ಞಾ ವಿಧಿ ಬೋದಿಸಿದರು.
ವೇದಿಕೆಯಲ್ಲಿ ಸಂಘದ ಹಿರಿಯರಾದ ಆನಂದ ಸಿ ಕುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್ ಕೊರವಡಿ, ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ ಎಮ್, ಮಾಜಿ ಅಧ್ಯಕ್ಷರಾದ ಸಂಜೀವ ಎಮ್ ಎಸ್, ಗಣೇಶ್ ಕಾಂಚನ್ , ಸಂಘದ ಪ್ರಮುಖರಾದ ಗೀತಾ ರಾಜಕು

ಮಾರ್ ,ಕೃಷ್ಣಮೂರ್ತಿ ಮರಕಾಲ, ಆನಂದ ಎಮ್ ಉಪಸ್ಥಿತರಿದ್ದರು .

 ಡ್ರಾಮಾ ಜೂನಿಯರ್ಸ್ ಸೀಸನ್4 ವಿಜೇತರಾದ ಸುಮೃದ್ಧಿ ಎಸ್ ಮೊಗವೀರ ,ನಿರ್ಗಮನ ಅಧ್ಯಕ್ಷರಾದ ಚಂದ್ರ ಬಂಗೇರ, ಜ್ಯೋತಿ ಸಂತೋಷ್ ,ನಿರ್ಗಮನ ಕಾರ್ಯದರ್ಶಿ ಶೈಲಜಾ, ಕೊರೋನ ವಾರಿಯರ್ಸ್ ಕೃಷ್ಣಮೂರ್ತಿ ಮರಕಾಲ, ಪ್ರವೀಣ್ ಕುಂದರ್, ಆನಂದ ಉಪ್ಲಾಡಿ ಇವರುಗಳನ್ನು ಸನ್ಮಾನಿಸಲಾಯಿತು. ಹಾಗೂ ಶೈಕ್ಷಣಿಕ ಪುರಸ್ಕಾರ ಕ್ರೀಡಾ ಪುರಸ್ಕಾರ ಕಲಾಪುರಸ್ಕಾರ ನೀಡಲಾಯಿತು.
 ಶೈಲಜಾ ಬಂಗೇರ ನಿರೂಪಿಸಿ ಪ್ರವೀಣ್ ಕುಂದರ್ ವಂದಿಸಿದರು.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close