Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದರ 9ನೇ ವಾರ್ಷಿಕ ಮಹಾಸಭೆ ಸಮಾಜ ಸೇವಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಮರಣ ನಿಧಿ ವಿತರಣೆ. ಡಿವಿಡೆಂಡ್ ಘೋಷಣೆ.-Karavalivani


ಕೋಟ: ಶ್ರೀ ರಾಮಾಂಜನೇಯ(Ramanjaneya) ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೋಡಿ ಕನ್ಯಾಣ ಇದರ ಮಹಾಸಭೆ ಇದರ 9ನೇ ವಾರ್ಷಿಕ ಮಹಾಸಭೆಯು ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿ ಕನ್ಯಾಣ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಶಂಭು ಪೂಜಾರಿಯವರ ಅಧ್ಯಕ್ಷತೆ ವಹಿಸಿದ್ದರು. 
 2021-22 ನೇ ಸಾಲಿನ ಆಡಳಿತ ವರದಿಯನ್ನು ಸಹಕಾರಿಯ ಸಿಬ್ಬಂದಿ ಸ್ವಾತಿ.ಕೆ ಮಂಡಿಸಿದರು.
 2021 22 ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಕರ್ಕೇರ ವಾಚಿಸಿದರು.ಈ ಸಭೆಯಲ್ಲಿ ಸದಸ್ಯರಿಗೆ ಶೇಕಡಾ 13% ಡಿವಿಡೆಂಟ್ ಘೋಷಣೆ ಮಾಡಲಾಯಿತು.
ಸಮಾಜ ಸೇವಕರಿಗೆ ಗೌರವಧನ ಸನ್ಮಾನ. 
ಈ ವರ್ಷದ ಸಾಮಾನ್ಯ ಸಭೆಯ ವಿಶೇಷವಾಗಿ ಸಮಾಜ ಸೇವಕರಾದ ಈಶ್ವರ ಮಲ್ಪೆ, ನಿತ್ಯಾನಂದ ಒಳಕಾಡು ಮತ್ತು ಅಶ್ವತ್ತಮ್ಮ ಇವರಿಗೆ ಗೌರವಧನ ನೀಡುವುದರೊಂದಿಗೆ ಸನ್ಮಾನಿಸಲಾಯಿತು. ನಂತರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ ಎರಡನೇ ಬಾರಿ ಆಯ್ಕೆಯಾದ ಮಂಜುನಾಥ ಎಸ್. ಕೆ. ಇವರನ್ನು ಆಡಳಿತ ಮಂಡಳಿಯು ಅವರು ಸಹಕಾರ ಕ್ಷೇತ್ರಕ್ಕೆ ಕೊಟ್ಟಂತ ಅವಿರತ ಸಾಧನೆಗಾಗಿ ಸನ್ಮಾನಿಸಲಾಯಿತು.
 ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸುಮಾರು 16 ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಸಭೆಯಲ್ಲಿ ನೀಡಲಾಯಿತು. ಮರಣ ಹೊಂದಿದ ಆರು ಮಂದಿ ಸದಸ್ಯರ ಮನೆಯವರಿಗೆ ರೂ 5000ದಂತೆ ಮರಣ ನಿಧಿಯನ್ನು ನೀಡಲಾಯಿತು.ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್ ಸ್ವಾಗತಿಸಿದರು.ಸಹಕಾರಿ ವ್ಯವಸ್ಥಾಪಕರಾದ ಸಂದೀಪ್ ಕರ್ಕೆರ ನಿರೂಪಿಸಿ ಧನ್ಯವಾದಗಳು ಸಮರ್ಪಿಸಿದರು.
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close