ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಸಚಿವರ ಭೇಟಿ ಮನವಿ-Karavalivani
@karavalivani, @ಕರಾವಳಿವಾಣಿ
ಕೋಟ: ಉಡುಪಿ ಜಿಲ್ಲಾ ಸೋಮಕ್ಷತ್ರಿಯ (Somakshatriya )ಗಾಣಿಗ ಸಮಾಜ ಬಾರ್ಕೂರು ವತಿಯಿಂದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ಮಾಡಿ ವೇಣುಗೋಪಾಲಕೃಷ್ಣನ ಸನ್ನಿಧಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಹಾಗೂ ಉನ್ನತೀಕರಣಕ್ಕಾಗಿ ಮನವಿ ನೀಡಿತು.
ಈ ಸಂದರ್ಭದಲ್ಲಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಉದಯ್ ಕುಮಾರ್ ಉಡುಪಿ, ಉಪಾಧ್ಯಕ್ಷ, ಶೇವಧಿ ಸುರೇಶ್ ಗಾಣಿಗ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಕೋಶಾಧಿಕಾರಿ ಗುರುರಾಜ್ ಗಾಣಿಗ ಕೆಮ್ಮಣ್ಣು, ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

