ಕಾವಡಿ- ಬಾರ್ಕೂರು ಬಿಲ್ಲವ ಸೇವಾ ಸಂಘದ ಗ್ರಾಮ ಸಭೆ-Karavalivani
@karavalivani, @ಕರಾವಳಿವಾಣಿ
ಕೋಟ: ಬಾರ್ಕೂರು ಬಿಲ್ಲವ ಸೇವಾ ಸಂಘದ ಗ್ರಾಮ ಸಭೆಯು ಕಾವಡಿ ಗರಡಿಯಲ್ಲಿ ಜರುಗಿತು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಬಾರ್ಕೂರು ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ ವಹಿಸಿದ್ದರು.
ಸಭೆಯಲ್ಲಿ ಬಾರ್ಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸರ್ವೋತ್ತಮ ಪೂಜಾರಿ ಅಕ್ಟೋಬರ್ 16ರಂದು ನಡೆಯುವ (Guru Jayanti)ಗುರು ಜಯಂತಿ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಹಾಗೂ ಗುರು ಸಂದೇಶ ಜಾಥಾ ಮೆರವಣಿಗೆ ಬಗ್ಗೆ ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಗೌರಿ ವಿ ಪೂಜಾರಿ , ಕೋಶಾಧಿಕಾರಿ ಮನು ಪೂಜಾರಿ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ಪೂಜಾರಿ ,ಮಾಜಿ ಅಧ್ಯಕ್ಷ ದಯಾನಂದ ಪೂಜಾರಿ, ನಾಗರಾಜ್,ಕಾವಡಿ ಗ್ರಾಮಾಧ್ಯಕ್ಷ ಇಂದಿರಾ ಪೂಜಾರಿ ,ಕಾವಡಿ ಗರಡಿಯ ಅರ್ಚಕರಾದ ಸತೀಶ ಪೂಜಾರಿ,ರಾಜು ಪೂಜಾರಿ, ಅಭಿ ,ಸತೀಶ ಪೂಜಾರಿ , ಗುಂಡು ಗುಲಾಬಿ ಪೂಜಾರ್ತಿ ಉಪಸ್ಥಿತರಿದ್ದರು.
ಕಾವಡಿ ಗ್ರಾಮದ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ ಸ್ವಾಗತಿಸಿ ವಂದಿಸಿದರು. ರಾಮದಾಸ ಪೂಜಾರಿ ಸಭೆಯನ್ನು ನಿರ್ವಹಿಸಿದರು.

