ಪರಿಸರ ಜಾಗೃತಿ ಕಾರ್ಯಾಗಾರ 5ನೇ ಮಾಲಿಕೆ ಕೋಟತಟ್ಟು ಪಡುಕರೆ ಗುಡ್ಡಿಶಾಲೆ ಆಯೋಜನೆ-Karavalivani
@karavalivani, @ಕರಾವಳಿವಾಣಿ
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಗೆಳೆಯರ ಬಳಗ ಕಾರ್ಕಡ ಇವರುಗಳ ಸಹಯೋಗದೊಂದಿಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಕ್ರಾಂತಿ(Green revolution) ಸೃಷ್ಠಿಸುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪರಿಸರ ಕಾಳಜಿಯ ಕಾರ್ಯಾಗಾರ 5ನೇ ಮಾಲಿಕೆ ಕೋಟತಟ್ಟು ಪಡುಕರೆ -ಗುಡ್ಡಿ ಶಾಲೆಯಲ್ಲಿ ಇದೇ ಬರುವ ಶನಿವಾರ 17ರಂದು ಹಮ್ಮಿಕೊಂಡಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಛೇರಿ ಇದರ ಇಲಾಖಾಧಿಕಾರಿ ಹೆಚ್ ಲಕ್ಷ್ಮಿಕಾಂತ್ ಭಾಗವಹಿಸಲಿದ್ದಾರೆ.
ಗಿಳಿಯಾರು ಯುವಕ ಮಂಡಲ,ಮಣೂರು ಫ್ರೆಂಡ್ಸ್,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷಸೌರಭ ಕಲಾರಂಗ ಕೋಟ ಹಂದಟ್ಟು ಮಹಿಳಾ ಬಳಗ,ಮಣೂರು ಫ್ರೆಂಡ್ಸ್ ಎಲ್ಲರೂ ಸಹಕಾರ ನೀಡಲಿದೆ.

