Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸಾಸ್ತಾನ -ನಾರಾಯಣ ಗುರು ಜಯಂತೋತ್ಸವ ಮನುಕುಲದ ಗುರುಮಾಣಿಕ್ಯ ನಾರಾಯಣಗುರುಗಳು- ಗಣೇಶ ಪೂಜಾರಿ ಪಾಂಡೇಶ್ವರ-karavalivani


@karavalivani, @ಕರಾವಳಿವಾಣಿ

ಕೋಟ: ನಾರಾಯಣಗುರುಗಳ ತ್ವತ್ವ ಸಿದ್ಧಾಂತ ಇಡೀ ಮನುಕುಲದ ದೊಡ್ಡ ಶಕ್ತಿಯಾಗಿ ರೂಪಿಸಿತು ಎಂದು ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಗೌರವ ಸಲಹೆಗಾರ ಗಣೇಶ ಪೂಜಾರಿ ಪಾಂಡೇಶ್ವರ ಹೇಳಿದ್ದಾರೆ
ಗೋಳಿಗರಡಿ ದೈವಸ್ಥಾನದಲ್ಲಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇವರ ಆಶ್ರಯದಲ್ಲಿ ನಾರಾಯಣಗುರು ಜಯಂತೋತ್ಸವದ ಅಂಗವಾಗಿ ಪೂಜೆ ಮತ್ತು ಗುರುಗಳಿಗೆ ಪುಷ್ಪ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಅಸ್ಪçಶ್ಯತೆ ಹೋಗಲಾಡಿಸಿ ಇಡೀ ಜಗತ್ತಿನಲ್ಲಿ ಒಂದೇ ಜಾತಿ,ಮತ,ದೇವರು ಎಂಬ ಸಂದೇಶ ಸಾರಿದ ಮಹಾನ್ ದೇವಮಾನವರಲ್ಲಿ ಒರ್ವರಾದರು.ಸಮುದಾಯದ ಉನ್ನತಿಯ ಜೊತೆ ಇಂದಿನ ದಿನದಲ್ಲಿ ತತ್ವ ಸಿದ್ದಂತವನ್ನು ಪ್ರತಿಯೊಬ್ಬ ಬಿಲ್ಲವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆನೀಡಿದರು. 
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗೊಳಿಗರಡಿ ಕ್ಷೇತ್ರದ ಪಾತ್ರಿಗಳಾದ ಶ್ರೀ ಶಂಕರ ಪೂಜಾರಿ ಇವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು.
ಇದೇ ವೇಳೆ ಗುರುಗಳಿಗೆ ಸರ್ವರಿಂದ ಗುರುಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಬ್ರಹ್ಮ ಬೈದರ್ಕಳ ಮಹಿಳಾ ಭಜನಾ ಮಂಡಳಿಯಿoದ ಭಜನಾ ಕಾರ್ಯಕ್ರಮ ನೆರವೆರಿತು.
ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಜಿ.ವಿಠಲ ಪೂಜಾರಿ, ಅಧ್ಯಕ್ಷ ಎಂ. ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ, ಕಾರ್ಯದರ್ಶಿ ಚಂದ್ರಮೋಹನ ಪೂಜಾರಿ, ಗೌರವ ಸಲಹೆಗಾರರಾದ ಶಂಕರ ಪೂಜಾರಿ ಪಾತ್ರಿಗಳು, ಚೆನ್ನಾಯ್ಯ ಪೂಜಾರಿ ಐರೋಡಿ, ರತ್ನ ಜೆ ರಾಜ್, ಗಣೇಶ ಪೂಜಾರಿ, ಪಂಜು ಪೂಜಾರಿ, ಎಡಬೆಟ್ಟು,ಗಣಪ ಪೂಜಾರಿ ಐರೋಡಿ, ಜ್ಯೋತಿ ಉದಯ ಕುಮಾರ ಗ್ರಾಮ ವ್ಯಾಪ್ತಿಯ ಅಧ್ಯಕ್ಷರುಗಳಾದ, ಸುರೇಶ ಪೂಜಾರಿ ಪಾಂಡೇಶ್ವರ, ರಾಜು ಪೂಜಾರಿ ಮೂಡಹಡು, ಸುಧಾಕರ ಪೂಜಾರಿ ಐರೋಡಿ, ವಿಜಯ ಪೂಜಾರಿ ಬಾಳ್ಕುದ್ರು, ಸುರೇಶ ಪೂಜಾರಿ ಗುಂಡ್ಮಿ ಮತ್ತಿತರರರು ಉಪಸ್ಥಿತರಿದ್ದರು.



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close