ಹೊಸ ಆಯುಷ್ಮಾನ್ ಅಭಿಯಾನಕ್ಕೆ ಸಚಿವ ಕೋಟ ಚಾಲನೆ-karavalivani
@karavalivani, @ಕರಾವಳಿವಾಣಿ
ಕೋಟ: ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಗ್ರಾಮದ ಜನರನ್ನು ಮತ್ತು ಅಲ್ಲಿಯ ಸಮಸ್ಯೆಗಳನ್ನು ಅರ್ಥೆÊಸಿಕೊಂಡು ಕೆಲಸ ಮಾಡಿದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಭಾನುವಾರ ಕೋಟ ಗ್ರಾಮ ಪಂಚಾಯಿತಿ ಹಾಗೂ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಎಜುಕೇರ್ ಗ್ರಾಮ ಒನ್ ಸೇವಾ ಕೇಂದ್ರದ ಸಹಯೋಗದೊಂದಿಗೆ ಹೊಸ
ಆಯುಷ್ಮಾನ್ ಅಭಾ ಜಂಟಿ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಉಚಿತ ಸೇವಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುಷ್ಮಾನ್ ಅಭಾ ಜಂಟಿ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಉಚಿತ ಸೇವಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಜವಾದ ಬಡವರಿಗೆ ಇಂತಹ ಸೌಲಭ್ಯಗಳು ಸಿಗಬೇಕು. ಯಾರೂ ಕೂಡಾ ಇದರಿಂದ ವಂಚಿತರಾಗಬಾರದು ಎಂದು ಹೇಳಿದ ಅವರು ಕೋಟ ಗ್ರಾಮ ಪಂಚಾಯಿತಿ ಉಚಿತವಾಗಿ ಈ ಸೌಲಭ್ಯ ಗ್ರಾಮಸ್ಥರಿಗೆ ಒದಗಿಸುತ್ತಿರುವುದು ರಾಜ್ಯದ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ ಎಂದರು.
ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಜಯಂತಿ ಪೂಜಾರಿ, ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಎಜುಕೇರ್ ಗ್ರಾಮ ಒನ್ ಸೇವಾ ಮುಖ್ಯಸ್ಥ ಚೇತನ್ ಇದ್ದರು.
ಚಂದ್ರ ಆಚಾರ್ ಸ್ವಾಗತಿಸಿದರು. ಚಂದ್ರ ಪೂಜಾರಿ ವಂದಿಸಿದರು.


