ಚಿತ್ರಪಾಡಿ- ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು -ಪದ್ಮನಾಭ ಕಾಂಚನ್-Karavalivani
@karavalivani, @ಕರಾವಳಿವಾಣಿ-
ಕೋಟ: ಮುಗ್ಧ ಮನದಲ್ಲಿ ಅಕ್ಷರವ ಬಿತ್ತಿ ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿರುವವರು ಶಿಕ್ಷಕರ ಪಾತ್ರ ಗಣನೀಯ ಎಂದು ಬ್ರಹ್ಮಾವರದ ಚಾರ್ಟೆಡ್ ಅಕೌಂಟೆಡ್ ಪದ್ಮನಾಭ ಕಾಂಚನ್ ಹೇಳಿದರು
ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ಆಯೋಜಿಸಿರುವ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುರುಗಳ ಸ್ಥಾನ ಮಹತ್ವವಾದದ್ದು ಪ್ರಸ್ತುತ ಕಾಲದ ಶಿಕ್ಷಕ ವೃತ್ತಿ ಕಷ್ಟದಾಯಕ ಆದರೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶಿಕ್ಷಕರಿಗೆ ಅತೀವ ಕಾಳಜಿಯುಕ್ತ ಉತ್ಕೃಷ್ಟ ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಶಿಕ್ಷಕರ ಕಾರ್ಯವನ್ನು ಕೊಂಡಾಡಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ನಾರಾಯಣ ಮಧ್ಯಸ್ಥ, ಆನಂದ ರಾಮ ವಾಕುಡ, ಶಿನರಸಿಂಹ ಆಚಾರ್ ರವರನ್ನು ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರಿ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ ವಹಿಸಿದ್ದರು.
ಉಡುಪಿ ಎಂ.ಜಿ.ಎo ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್, ಚಿತ್ರಪಾಡಿ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಸತ್ಯನಾರಾಯಣ ನಾಯರಿ, ಫ್ರೆಂಡ್ಸ್ನ ಗೌರವಾಧ್ಯಕ್ಷ ರವಿ ಪೂಜಾರಿ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ 85% ಅಧಿಕ ಅಂಕ ಗಳಿಸಿದ 2021-22ರಲ್ಲಿ ಚಿತ್ರಪಾಡಿ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. 2022ರಲ್ಲಿ ನಡೆದ ತಾಲ್ಲೂಕು ಮಟ್ಟದ ಕೋಕೋ ವಿಜೇತ ತಂಡವಾಗಿರುವ ಸರ್ಕಾರಿ ಶಾಲೆ ಚಿತ್ರಪಾಡಿ ತಂಡವನ್ನು ಗುರುತಿಸಲಾಯಿತು.
ಗಿರಿ ಫ್ರೆಂಡ್ಸ್ ಮಾಧವ ಪೈ ಪ್ರಾಸ್ತಾವನೆ ಸಲ್ಲಿಸಿದರು, ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಚಾಲಕ ಸತ್ಯ ನಾರಾಯಣ ನಾಯರಿ ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ ಪೂಜಾರಿ ವಂದಿಸಿದರು. ಈ ಕಾರ್ಯಕ್ರಮವನ್ನು ಮಂಜುನಾಥ್ ಆಚಾರ್ ಸಂಯೋಜನೆ ಮಾಡಿದರು, ಸತೀಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

