ಆಸೀಫ್ ಪಾರಂಪಳ್ಳಿ ಹಾಗೂ ಮಹೀಯುದ್ದೀನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಇವರ ಸಹಯೋಗದಲ್ಲಿ ನಡೆಯುವ ನಾಲ್ಕು ಜೋಡಿ ಯತೀಮ್ ಹೆಣ್ಣುಮಕ್ಕಳ ಸಮೂಹಿಕ ವಿವಾಹದ ಅರ್ಜಿ ಆಹ್ವಾನಕ್ಕೆ ಚಾಲನೆ-karavalivani
@karavalivani, @ಕರಾವಳಿವಾಣಿ
ಕೋಟ : ಆಸೀಫ್ ಪಾರಂಪಳ್ಳಿ ಹಾಗೂ ಮಹೀಯುದ್ದೀನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಇವರ ಸಹಯೋಗದಲ್ಲಿ ನಡೆಯುವ ನಾಲ್ಕು ಜೋಡಿ ಯತೀಮ್ ಹೆಣ್ಣುಮಕ್ಕಳ ಸಮೂಹಿಕ ವಿವಾಹದ ಅರ್ಜಿ ಆಹ್ವಾನಕ್ಕೆ ಸೆ. 9ರಂದು ಶುಕ್ರವಾರ ಮಹೀಯುದ್ದೀನ್ ಜುಮ್ಮಾ ಮಸೀದಿ ಕೋಡಿ ಕನ್ಯಾನದಲ್ಲಿ ಮಸೀದಿಯ ಖತಿಬರಾದ ಸಿದ್ದಿಕ್ ಸಖಾಫಿಯವರು ತಕ್ಬೀರ್ ನೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಸೀಫ್ ಪಾರಂಪಳ್ಳಿ, ಜಮಾತ್ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಬಿ ಕೆ, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಗೌರವಾಧ್ಯಕ್ಷ ಮೂಸ ಬ್ಯಾರಿ, ಕಾರ್ಯದರ್ಶಿ ಲತೀಫ್ ಪಾರಂಪಳ್ಳಿ, ಹುಸೇನ್ ಕೆ., ಹಸೈನಾರ್ ಕೆ. ಎಚ್., ನಾಸಿರ್ ಕೋಡಿ, ಭಾಷ ಪಾರಂಪಳ್ಳಿ, ಮನ್ಸೂರ್ ಪಾರಂಪಳ್ಳಿ, ಇನ್ನು ಜಮಾತ್ ಬಾಂಧವರು ಉಪಸ್ಥಿತರಿದ್ದರು.
ಮದುವೆ ಅರ್ಜಿಯಲ್ಲಿ ಈ ಕೆಳಗಿನ ನಿಬಂಧನೆಗಳನ್ನು ನೀಡಲಾಯಿತು.
1. ವಧು ಯತೀಮ್ ಆಗಿರಬೇಕು ಅಥವಾ ತುಂಬಾ ಬಡವರಾಗಿರಬೇಕು, ಹೆಚ್ಚು ವಯಸ್ಸಿನವರಿಗೆ ಆದ್ಯತೆ ನೀಡಲಾಗುವುದು.
2. ಅಗತ್ಯಕ್ಕಿಂತ ಹೆಚ್ಚು ಅರ್ಜಿ ಬಂದಲ್ಲಿ ಕಮಿಟಿಯ ಮುಖಾಂತರ ಆಯ್ಕೆ
ಮಾಡಲಾಗುತ್ತದೆ.
3. ಅರ್ಜಿಯನ್ನು ಸೆಪ್ಟೆಂಬರ್ 10ನೇ ತಾರೀಖಿನಿಂದ ಅಕ್ಟೋಬರ್ 10ನೇ ತಾರೀಕಿನವರೆಗೆ ಸ್ವೀಕರಿಸಲಾಗುವುದು.
4. ಅಕ್ಟೋಬರ್ 20 ರಂದು ಅಭ್ಯರ್ಥಿಗಳನ್ನು ಆಯ್ಕೆ
ಮಾಡಲಾಗುವುದು.
5, ಆಯ್ಕೆಯಾದ ವಧುವಿಗೆ ವರನನ್ನು ಹುಡುಕಲು 3 ತಿಂಗಳು ಸಮಯ ನೀಡಲಾಗುವುದು.
6. ಆಯ್ಕೆಯಾದ ಪ್ರತಿ ವಧುವಿಗೆ ಐದು ಪವನ್ ಚಿನ್ನ ಮತ್ತು ಮದುವೆಯ ಡ್ರೆಸ್, ಬುರ್ಖಾ,
ವಾಚ್, ಚಪ್ಪಲಿ ಮತ್ತು ವರನಿಗೆ ಡ್ರೆಸ್, ವಾಚ್‌ಗಳನ್ನು ನೀಡಲಾಗುವುದು.
7. ಮದುವೆ ದಿನದ ಊಟದ ಮತ್ತು ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಭರಿಸಲಾಗುವುದು.
8. ಮದುವೆಯನ್ನು ಅದ್ದೂರಿಯಾಗಿ ಪ್ರೆಸಿಡೆಂಟ್ ಕನ್ವೆನ್ಸನ್ ಸೆಂಟರ್ ತೆಕ್ಕಟ್ಟೆಯಲ್ಲಿ
ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

