Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕಾರ್ಕಡ ಗೆಳೆಯರ ಬಳಗ ಕಾರಂತ ಪುರಸ್ಕಾರ ಬನ್ನಂಜೆ ಸಂಜೀವ ಸುವರ್ಣ ಆಯ್ಕೆ-Karavalivani

ಬನ್ನಂಜೆ ಸಂಜೀವ

@karavalivani, @ಕರಾವಳಿವಾಣಿ

ಕೋಟ: ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಅಂಗವಾಗಿ ಕಾರ್ಕಡ ಗೆಳೆಯರ ಬಳಗ ವತಿಯಿಂದ ನೀಡಲ್ಪಡುವ ಗೆಳೆಯರ ಬಳಗ - ಕಾರಂತ ಪುರಸ್ಕಾರಕ್ಕೆ ಈ ಬಾರಿ ಕಾರಂತರ ಒಡನಾಡಿ, ಯಕ್ಷಗಾನ ಕಲಾವಿದ,ಹಾಗೂ ಗುರು ,ಸಾಹಿತಿ ನಾಡು ನುಡಿ ಏಳಿಗೆಗಾಗಿ ಅನನ್ಯವಾಗಿ ತೊಡಗಿಸಿಕೊಂಡಿರುವ ಬನ್ನಂಜೆ ಬನ್ನಂಜೆ ಸಂಜೀವ ಭಾಜನರಾಗಿದ್ದಾರೆ.
ಮೂಲ ಬನ್ನಂಜೆಯವರಾದ ಇವರು ಯಕ್ಷಗಾನ ಕಲೆಯ ಅನೇಕ ಆಯಾಮಗಳನ್ನು ಡಾ ಕಾರಂತರೇ ಮೋದಲಾದ 21 ಕಲಾ ಗುರುಗಳಿಂದ ಕಲಿತು, ಪರಿಣಿತರಾಗಿ, ಗುರುಗಳಾಗಿ ಬೆಳೆದು ದೇಶ ವಿದೇಶಗಳಲ್ಲಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸಾಧಕರು ಇವರಾಗಿದ್ದಾರೆ. ಯಕ್ಷಗಾನವಲ್ಲದೇ, ಭರತನಾಟ್ಯ,ಕೋಡಿಯಾಟ್ಟಂ, ಕಥಕ್ , ನಾಟಕ ಕಲೆಯಲ್ಲೂ ಪರಿಣತಿ ಪಡೆದವರಾಗಿದ್ದಾರೆ.ಡಾ ಕೋಟ ಶಿವರಾಮ ಕಾರಂತರ ನಂತರ ಇವರ ನಿರ್ದೇಶನದಲ್ಲಿಯಕ್ಷಗಾನ ಬೇರೆ ದೇಶ ವಿದೇಶಕ್ಕೆ ಕೊಂಡೊಯ್ದು, ಪ್ರದರ್ಶನ ನೀಡಿ ಖ್ಯಾತಿ ಗಳಿಸಿದ ಹೆಗ್ಗಳಿಕೆ ಇವರದ್ದು.ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಒಳಗೊಂಡಿದೆ.
ಗೆಳೆಯರ ಬಳಗ ಕಾರಂತ ಪುರಸ್ಕಾರ-2022 ಅಕ್ಟೋಬರ್ ತಿಂಗಳ 15ರ ಶನಿವಾರ ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಬನ್ನಂಜೆಯವರಿಗೆ ಪ್ರದಾನಮಾಡಲಿದ್ದಾರೆ. ಎಂದು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close