Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕೊರೋನಾ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ-karavalivaninews

ನಿಮ್ಮ ಧ್ವನಿಯಿಂದ ಕೋವಿಡ್-19 ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತ ಈ ಸ್ಮಾರ್ಟ್​ಫೋನ್ ಆ್ಯಪ್ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸ್ಮಾರ್ಟ್‌ಫೋನ್ (Smartphone) ಅಪ್ಲಿಕೇಶನ್ ಜನರ ಧ್ವನಿಯಲ್ಲಿ ಕೋವಿಡ್ -19 (Covid 19) ಸೋಂಕನ್ನು ನಿಖರವಾಗಿ ಪತ್ತೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಅಪ್ಲಿಕೇಶನ್ ಮೂಲಕ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದ್ದು, ನಿಖರವಾದ ಮಾಹಿತಿ ನೀಡುತ್ತದೆ ಮತ್ತು ಬಳಸಲು ಸುಲಭವಾಗಿದೆ ಎಂದು ಸಂಧೋಧಕರು ತಿಳಿಸಿದ್ದಾರೆ. ಹೀಗಾಗಿ PCR ಪರೀಕ್ಷೆಗಳು ದುಬಾರಿ ಇರುವ ಕಡೆ ಇದನ್ನು ಬಳಸಬಹುದಾಗಿದೆಈ ಬಗ್ಗೆ ಮಾಹಿತಿ ನೀಡಿರುವ ನೆದರ್‌ಲ್ಯಾಂಡ್‌ನ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಡೇಟಾ ಸೈನ್ಸ್‌ನ ಸಂಶೋಧಕ ವಫಾ ಅಲ್ಜ್‌ಬಾವಿ, “ಸರಳ ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಫೈನ್–ಟ್ಯೂನ್ ಮಾಡಿದ AI ಅಲ್ಗಾರಿದಮ್‌ಗಳು ಯಾವ ರೋಗಿಗಳಿಗೆ ಕೋವಿಡ್ -19 ಸೋಂಕು ತಗುಲಿದೆ ಎಂಬುದನ್ನು ನಿರ್ಧರಿಸುವಲ್ಲಿ ಸ್ಪಷ್ಟ ಫಲಿತಾಂಶವನ್ನು ತೋರಿಸಿದೆ,” ಎಂದು ಹೇಳಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕ್ರೌಡ್–ಸೋರ್ಸಿಂಗ್ ಕೋವಿಡ್ -19 ಸೌಂಡ್ಸ್ ಅಪ್ಲಿಕೇಶನ್‌ನಿಂದ ಪ್ರಯೋಗ ನಡೆಸಲಾಗಿದ್ದು, ಇದರಲ್ಲಿ ಆರೋಗ್ಯವಾಗಿರುವ ಹಾಗೂ ಅನಾರೋಗ್ಯವಾಗಿರುವ 4,352 ಜನರನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು 893 ಧ್ವನಿಯ ಮಾದರಿಗಳನ್ನು ಸಂಗ್ರಹಿಸಿ ಇವರಲ್ಲಿ 308 ಜನರಿಗೆ ಕೋವಿಡ್ -19 ಇರುವುದು ಕಂಡುಬಂದಿದೆ. ಇನ್ನು ಈಗಾಗಲೇ ಕೋವಿಡ್-19 ಮಾಹಿತಿಯೊಂದಿಗೆ ಆಡಿಯೋ ನ್ಯೂಸ್ ಬ್ರೀಫ್‌ಗಳನ್ನು ಒದಗಿಸುವ ಆ್ಯಪಲ್ ಐಫೋನ್‍‍ನ ‘ಸಿರಿ‘ (ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್) ಸೇವೆ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ಆ್ಯಪಲ್ ತನ್ನ ಸಿರಿ ಧ್ವನಿ ಸಹಾಯಕವನ್ನು ನವೀಕರಿಸಿದ್ದು, ಜ್ವರದ ರೋಗಲಕ್ಷಣಗಳನ್ನು ಹೊಂದಿರುವ ಮತ್ತು ಕೊರೊನಾ ವೈರಸ್‌ನಿಂದ ಬಳಲುತ್ತಿದ್ದಾರೆ ಎಂದೆನಿಸುವ ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಿದೆ. ಈ ವೈಶಿಷ್ಟ್ಯವು ಈಗ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿದೆ..




ವದೆಹಲಿ: ಎಲ್ಲ  ಕಡೆ  ಕೊರೊನಾ ಕಡಿಮೆಯಾಗಿ ಸಾಮಾನ್ಯ ಸ್ಥಿತಿ ತಲುಪಿದ್ದು, ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ  ಜನರ  ಸಂತೋಷ ಪಡುತ್ತಿರುವ  ಸಮಯದಲ್ಲೇ  ವಿಶ್ವ ಆರೋಗ್ಯ ಸಂಸ್ಥೆ(WHO) ಮಹತ್ವದ ಮಾಹಿತಿ ನೀಡಿದೆ. ಕೊರೋನಾ ಕಡಿಮೆಯಾಗಿದ್ದರೂ, ಜಾಗತಿಕವಾಗಿ ಇನ್ನೂ ಪ್ರತಿ 44 ಸೆಕೆಂಡುಗಳಿಗೆ ಒಬ್ಬರು ಕೋವಿಡ್ ನಿಂದ ಸಾಯುತ್ತಿದ್ದಾರೆ ಎಂದು ಎಚ್ಚರಿಸಿದೆ.

ಡಬ್ಲ್ಯು.ಹೆಚ್‌.ಒ. ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವೈರಸ್ ಮರೆಯಾಗುವುದಿಲ್ಲ. ದಾಖಲಾದ ಪ್ರಕರಣಗಳು ಮತ್ತು ಸಾವುಗಳಲ್ಲಿ ಜಾಗತಿಕ ಕುಸಿತವು ಮುಂದುವರಿಯುತ್ತಿದೆ. ಆದರೆ ಈ ಪ್ರವೃತ್ತಿಗಳು ಮುಂದುವರಿಯುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಫೆಬ್ರವರಿಯಿಂದ ಸಾಪ್ತಾಹಿಕ ವರದಿಯಾದ ಸಾವುಗಳ ಸಂಖ್ಯೆಯು ಶೇಕಡ 80 ಕ್ಕಿಂತ ಕಡಿಮೆಯಿರಬಹುದು,ಆದರೆ ಕಳೆದ ವಾರ ಪ್ರತಿ 44 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯು ಕೋವಿಡ್ -19 ನೊಂದಿಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದರು.

ಹೆಚ್ಚಿನ ಸಾವುಗಳು ತಪ್ಪಿಸಬಹುದಾದವು. ಸಾಂಕ್ರಾಮಿಕ ರೋಗವು ಕೊನೆಗೊಂಡಿಲ್ಲ ಎಂದು ನಾನು ಹೇಳುವುದನ್ನು ಕೇಳಲು ನೀವು ನಿರಾಕರಿಸಬಹುದು. ಆದರೆ, ಅದು ಇರುವವರೆಗೂ ನಾನು ಅದನ್ನು ಹೇಳುತ್ತಲೇ ಇರುತ್ತೇನೆ. ಈ ವೈರಸ್ ಕೊನೆಯಾಗುವುದಿಲ್ಲ ಎಂದು ಅವರು ಹೇಳಿದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close