Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ರಥಬೀದಿ ಗೆಳೆಯರ ವತಿಯಿಂದ ಗುಂಡ್ಮಿ ಮಾಣಿಚೆನ್ನಕೇಶವದಲ್ಲಿ ಅದ್ಧೂರಿಯ ಸೋಣೆ ಆರತಿ ,ರಂಗಪೂಜೆ ಸೇವೆ-karavalivani


@karavalivani, @ಕರಾವಳಿವಾಣಿ-

ಕೋಟ: ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ಗುಂಡ್ಮಿ ಇವರ ಆಶ್ರಯದಲ್ಲಿ ಗುಂಡ್ಮಿ ಮಾಣಿಚೆನ್ನಕೇಶವ ದೇವಳದಲ್ಲಿ ಅದ್ಧೂರಿಯ ರಂಗಪೂಜೆ,ಸೋಣೆ ಆರತಿ ಪೂಜಾ ಕಾರ್ಯಕ್ರಮಗಳು ಭಾನುವಾರ ವಿಜೃಂಭಣೆಯಿoದ ಸಂಪನ್ನಗೊoಡಿತು.

ವೇ ಮೂ ಅನಂತರಾಮ ಬಾಯರಿ ನೇತ್ರತ್ವದಲ್ಲಿ ಅರ್ಚಕರಾದ ಅನಂತಕೃಷ್ಣ ಬಾಯರಿ,ಗೋಪಾಲಕೃಷ್ಣ ಐತಾಳ್,ನಾಗಪಯ್ಯ ಶಾಸ್ತ್ರಿ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೆರಿತು.ದೇವಳದಲ್ಲಿ ವಿವಿಧ ಬಗೆಯ ಹೂವಿನ ಅಲಂಕಾರದಿoದ ಶೃಂಗರಿಸಲಾಗಿತ್ತು.  ಗುಂಡ್ಮಿ ಗೋವಿಂದ ಸೆಟ್ಟಿಗಾರ್   ಅಲಂಕಾರದಲ್ಲಿ  ಸಹಕರಿಸಿದರು 
ಸಾವಿರಾರು ಭಕ್ತರು ಪೂಜಾಕಾರ್ಯದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು
ಕಳೆದ ಹತ್ತು ವರ್ಷಗಳಿಂದ ರಥಬೀದಿ ಗೆಳೆಯರ ವತಿಯಿಂದ ಶ್ರೀ ದೇವಳದಲ್ಲಿ ವಿಶೇಷ ಸೋಣೆ,ರಂಗಪೂಜೆ ಕಾರ್ಯಕ್ರಮ ನಡೆಯುತ್ತಿದೆ.

ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷ ಪ್ರಕಾಶ್ ಹೊಳ್ಳ,ಕಾರ್ಯದರ್ಶಿ ಶ್ರೀಧರ ಶಾಸ್ತ್ರಿ, ಗಣ್ಯರಾಗಿ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಕುoದಾಪುರದ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ನಾಗೇಶ್ ಗುಂಡ್ಮಿ, ಉದ್ಯಮಿ ಆನಂದ್ ಮರಕಾಲ, ಗೋಳಿಗರಡಿ ದೇವಳದ ಅಧ್ಯಕ್ಷ ಜಿ.ವಿಠ್ಠಲ ಪೂಜಾರಿ, ಮಾಧವ ಪೈ, ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ,ಸದಸ್ಯರಾದ ರಾಜು ಪೂಜಾರಿ,ಉದ್ಯಮಿ ಅನಂತ ಉಪಾಧ್ಯ,ರವೀಂದ್ರ ಐತಾಳ್ ಪಾರಂಪಳ್ಳಿ,ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ರಾಮಾಮೃತ ಭಜನಾ ತಂಡ ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ,ಶಿವಕೃಪಾ ಚಂಡೆ ಬಳಗದಿಂದ ಚಂಡೆವಾದನ ಏರ್ಪಡಿಸಲಾಗಿತ್ತು.
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close