ಎಳೆವೆಯಲ್ಲಿಯೇ ಬ್ಯಾಂಕಿನ ಅರಿವು ಅಗತ್ಯ"--ಮೀರಾ ಜಿ. -KARAVALIVANI
WebNews Kannada
16 ಸೆಪ್ಟೆಂ, 2022
@karavalivani, @ಕರಾವಳಿವಾಣಿ
ಕೋಟ: ವಿದ್ಯಾರ್ಥಿಳಿಗೆ ಶಾಲಾ ಮಟ್ಟದಲ್ಲಿ ಬ್ಯಾಂಕಿoಗ್ ವ್ಯವಹಾರಗಳ ಸಾಮಾನ್ಯ ಜ್ಞಾನ ,ಉಳಿತಾಯ ಪ್ರಜ್ಞೆ ,ಖಾತೆಗಳ ನಿರ್ವಹಣೆ ಹಾಗೂ ಡಿಜಿಟಲ್ ಬ್ಯಾಂಕ್ ನ ಸೇವೆಯ ಬಗ್ಗೆ ಉಡುಪಿಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಲಹೆಗಾರರಾದ ಮೀರಾ .ಜಿ ತಿಳಿಸಿದರು.
ಇತ್ತೀಚೆಗೆ ಕೋಟದ ವಿವೇಕ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕೆನರಾ ಆರ್ಥಿಕ ಟ್ರಸ್ಟ್, ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ ಶಾಲೆಯ
ಈ ಸುದ್ದಿ ಓದಲು ಕ್ಲಿಕ್ ಮಾಡಿ
ಗ್ರಾಹಕ ಕ್ಲಬ್ ಆಶ್ರಯದಲ್ಲಿ ಬ್ಯಾಂಕಿoಗ್ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು
ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಹೊಳ್ಳ ವಹಿಸಿ ಸ್ವಾಗತಿಸಿದರು. ಶಾಲೆಯ ಗ್ರಾಹಕ ಕ್ಲಬ್‌ನ ಅಧ್ಯಕ್ಷೆ ವಾರುಣಿ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಹಕ ಕ್ಲಬ್ ನ ಸಂಚಾಲಕರಾದ ಶಿಕ್ಷಕ ಗಣೇಶ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿದರು. ಗ್ರಾಹಕ ಕ್ಲಬ್‌ನ ಕಾರ್ಯದರ್ಶಿ ತುಳಸಿ ವಂದಿಸಿದರು.