ಸಾಸ್ತಾನ- ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ-Karavalivani
WebNews Kannada
16 ಸೆಪ್ಟೆಂ, 2022
@karavalivani, @ಕರಾವಳಿವಾಣಿ
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಸಾಸ್ತಾನ ರೋಟರಿ ಸಭಾಭವನದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಶಿವರಾಯ ಪ್ರಭು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಪದಾಧಿಕಾರಿಗಳಿಗೆ ಕ್ಷೇತ್ರದ ಹಿನ್ನೆಲೆ ಹಾಗೂ ಯೋಜನೆ ಕಾರ್ಯಕ್ರಮದ ಬಗ್ಗೆ ಸಮಗ್ರವಾದ ಮಾಹಿತಿ
ಈ ಸುದ್ದಿ ಓದಲು ಕ್ಲಿಕ್ ಮಾಡಿ
ನೀಡಿದರು.
ತಾಲೂಕು ಯೋಜನಾಧಿಕಾರಿ ದಿನೇಶ್ ಸೇರಿಗಾರ್ ಪ್ರಗತಿನಿಧಿ ನಿಯಮಾವಳಿ ಬಗ್ಗೆ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಆಂತರಿಕ ಲೆಕ್ಕ ಪರಿಶೋಧಕ ಮಂಜುನಾಥ್ ತುರ್ತು ಲೆಕ್ಕಪರಿಶೋಧನೆ ಹಾಗೂ ಒಕ್ಕೂಟದ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿದರು.
ಮಂದಾರ್ತಿ ವಲಯದ ಮೇಲ್ವಿಚಾರಕ ಅಜಿತ್ ,ಸಿಎಸ್ಸಿ ನೂಡಲ್ ಅಧಿಕಾರಿ ಗಣೇಶ ,ಕೃಷಿಯ ಅಧಿಕಾರಿಯಾದ ರಾಜೇಂದ್ರ , ತಾಲೂಕಿನ ಜನಜಾಗೃತಿ ಅಧ್ಯಕ್ಷ ಅಚ್ಯುತ್ ಪೂಜಾರಿ, ತರಬೇತಿ ಕಾರ್ಯಗಾರವನ್ನು ಪಾಂಡೇಶ್ವರ ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ ನಿರೂಪಿಸಿದರೆ, ಕಾವಡಿ ಸೇವಾ ಪ್ರತಿನಿಧಿ ರಮೇಶ್ ರಾವ್ ಸ್ವಾಗತಿಸಿದರು. ಐರೋಡಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಚಂದ್ರಕಲಾ ವಂದಿಸಿದರು.