ಶ್ರೀಮಠ ಬಾಳೆಕುದ್ರು ನೃಸಿಂಹಾಶ್ರಮ ಶ್ರೀಗಳ ಚಾತುರ್ಮಾಸ್ಯ" today news karavalivani
ಕೋಟ: ಶ್ರೀಶುಭಕೃತ್ ನಾಮ ಸಂವತ್ಸರದ ಆಷಾಢ ಪೂರ್ಣಿಮಾ,ಬುಧವಾರ ಜು.13ರಂದು ಶ್ರೀಮಠ ಬಾಳೆಕುದ್ರು ನೃಸಿಂಹಾಶ್ರಮ ಶ್ರೀಗಳ ಪಟ್ಟದ ದೇವರಾದ ಶ್ರೀ ಲಕ್ಷಿನೃಸಿಂಹ ದೇವರ ಸನ್ನಿಧಿಯಲ್ಲಿ "ವ್ಯಾಸಪೂಜಾ ಚಾತುರ್ಮಾಸ್ಯ" ಸಂಕಲ್ಪಾದಿ ಧರ್ಮಗಳನ್ನು ಯಥಾವಿಧಿ ನಡೆಸಿ,(karavalivani) ವಿಶೇಷಾನುಷ್ಠಾನದ ಜೊತೆಗೆ ಶ್ರೀಮಠದ ಶಿಷ್ಯರ, ಭಕ್ತರ, ಕ್ಷೇಮಾಭಿವೃದ್ಧಿಗಾಗಿ,ಲೋಕಕಲ್ಯಾಣಕ್ಕಾಗಿ, ಪೂಜಾ ಕೈಂಕರ್ಯಗಳನ್ನು ದಿನ ನಿತ್ಯ ಸಾಂಗವಾಗಿ ನೆರವೇರಿಸಿ, ಹಾಗೆಯೇ ಚಾತುರ್ಮಾಸ್ಯ ವೃತದ ಸಂದರ್ಭದಲ್ಲಿ ಪ್ರತೀ ದಿನ ಬೆಳಿಗ್ಗೆ 10.00 ಗಂಟೆಯಿoದ ಮಧ್ಯಾಹ್ನ 1.00 ಗಂಟೆಯವರೆಗೆ ಊರಿನ ಪರವೂರಿನ ವಿವಿಧ ಮಕ್ಕಳು,ಮಹಿಳಾ ಹಾಗೂ ಪುರುಷರ ಭಜನಾ ತಂಡಗಳಿoದ ಭಜನಾ ಕಾರ್ಯಕ್ರಮವು ಜರುಗಲಿರುವುದು.

