ಕೋಟ: ಇಲ್ಲಿನ ಕೋಟ ,ಹಾಗೂ ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮತ್ತೆ ನೆರೆ ಆವರಿಸಿದ್ದು ಸಾಕಷ್ಟು ಮನೆಗಳು ಜಲಾವೃತಗೊಂಡಿವೆ.
ವಡ್ಡರ್ಸೆ ಕುದ್ರುಬೆಟ್ಟು, ಕಮ್ಮಟ್ಟು ಭಾಗದ ಕೆಲವು ಕುಟುಂಬಗಳನ್ನು ಕೋಟ ಕಂದಾಯ ನೀರಿಕ್ಷಕ ರಾಜು ನೇತ್ರತ್ವದಲ್ಲಿ ದೋಣಿ ಮೂಲಕ ಬೇರಡೆ ಸ್ಥಳಾಂತರಿಸಲಾಗಿದೆ.ಇನ್ನುಳಿದoತೆ ಕೋಟ ಗ್ರಾ.ಪಂ ವ್ಯಾಪ್ತಿಯ ಮೂಡುಗಿಳಿಯಾರು ಚಾರ್‌ಕೂರ್‌ಮನೆ ಭಾಗದಲ್ಲಿ ಹತ್ತಾರು ಮನೆ, ಹಂಡೆಕರೆ ಮನೆಯ ಸಮೀಪ ಒಂದು ಮನೆಗೆ ಜಲಾವೃತಗೊಂಡಿದ್ದು ಈ ಭಾಗಳಿಗೆ ಬ್ರಹ್ಮಾವರ ತಾ.ಪಂ ಇಒ ಎಚ್.ವಿ ಇಬ್ರಾಹಿಂಪುರ ಉಪಸ್ಥಿತಿಯಲ್ಲಿ ಕೋಟ ಗ್ರಾ.ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ನೇತ್ರತ್ವದಲ್ಲಿ ಸ್ಥಳ ವೀಕ್ಷಿಸಿ ಪರಿಹಾರ ಕ್ರಮ,ಮುಂಜಾಗೃತ ಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.ಈ ವೇಳೆ ಕೋಟ ಗ್ರಾಮ ಲೆಕ್ಕಿಗ ಚಲುವರಾಜ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಪoಚಾಯತ್ ಸದಸ್ಯರು ಉಪಸ್ಥಿತರಿದ್ದರು.
 |
| ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ಹಂಡೆಕರೆ ಮನೆಯ ಭಾಗ |
 |
| ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ಚಾರ್‌ಕೂರ್‌ಮನೆ ಭಾಗ ವೀಕ್ಷಣೆ |
 |
| ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ರುಬೆಟ್ಟು ಪರಿಸರದಲ್ಲಿ ದೋಣಿ ಮೂಲಕ ಸ್ಥಳಾಂತರ |