ಅಕ್ಯುಪ್ರೆಶರ್ ಮತ್ತು ಸುಜೋಕ್(Acupressure and Sujok therapy) ಥೆರಪಿಯ ಚಿಕಿತ್ಸಾ ಶಿಬಿರ ಆರಂಭ-karavalivani
ಕೋಟ: ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜುಲೈ 16ರಿಂದ 22ರವರೆಗೆ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಲಯನ್ಸ್ ಕ್ಲಬ್, ಹಂಗಳೂರು ಇವರ ಜಂಟಿ ಆಶ್ರಯದಲ್ಲಿ Acupressure and Sujok therapy‘ಅಕ್ಯುಪ್ರೆಶರ್ ಮತ್ತು ಸಜೋಕ್ ಥೆರಪಿಯ ಚಿಕಿತ್ಸಾ ಶಿಬಿರ’ ನಡೆಯಲಿದೆ. ಪ್ರಾಕೃತಿಕ ಚಿಕಿತ್ಸೆಯ ಅಂಗವಾದ ಈ ಚಿಕಿತ್ಸೆ ಪ್ರತೀ ದಿನ ಬೆಳಿಗ್ಗೆ ಗಂಟೆ 9ರಿಂದ ಸಂಜೆ 7ರವರೆಗೆ ನಡೆಯಲಿರುವ ಶಿಬಿರದ ಉದ್ಘಾಟನೆಯಲ್ಲಿ ಲಯನ್ಸ್ ಅಧ್ಯಕ್ಷ ಲಯನ್ ರಜತ್ ಹೆಗ್ಡೆ, ಡಾ. ಮಹೇಶ್ ಎನ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ವೆಂಕಟೇಶ ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.jpg)

