ಕೋಟ- ನೆರೆ ಹಾವಳಿಯಿಂದ ಬೆಳೆ ಹಾನಿ ,ರೈತರ ಕೃಷಿ ಸಾಲ ಮನ್ನಾಕ್ಕೆ ಸರಕಾರಕ್ಕೆ ಕೋಟ ಸಿ ಎ ಬ್ಯಾಂಕ್ ಮನವಿ -karavalivani
![]() |
| www.karavalivani.com |
ಕೋಟ: ಕಳೆದ 20 ದಿನಗಳಿಂದ ಹವಾಮಾನ ವೈಪರಿತ್ಯದಿಂದ ಸುರಿಯುತ್ತಿರುವ ಅತೀವ ಮಳೆಯಿಂದಾಗಿ ನೆರೆ ಹಾವಳಿ ಸೃಷ್ಟಿಯಾಗಿದ್ದು, ಈ ರೀತಿ ಉಂಟಾಗಿರುವ ಕೃತಕ ನೆರೆಯಿಂದ ಜನ ಸಾಮಾನ್ಯರ ಜೀವನ ಅಸ್ತ ವ್ಯಸ್ತವಾಗಿರುವ ಜೊತೆಗೆ ರೈತರ ಬೆಳೆ ಹಾನಿಗೊಳಗಾಗಿರುವ ಕುರಿತು ಕೋಟ ಸಹಕಾರಿ ವ್ಯವಸಾಯಕ ಸಂಘ ರೈತರ ಸಾಲಮನ್ನಕ್ಕಾಗಿ ಸರಕಾರದಲ್ಲಿ ಮನವಿ ಮಾಡಿದೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು ಪ್ರಸ್ತುತ ಭತ್ತ ಬೆಳೆಯ ನಾಟಿ ಮಾಡಿದ್ದು ಎಡಬಿಡದೆ ಸುರಿಯುತ್ತಿರವ ಮಳೆಯಿಂದಾಗಿ ಹೊಲಗಳಲ್ಲಿ ನೀರು ತುಂಬಿ ಹಾನಿಯಾಗಿದೆ ಈ ರೀತಿಯ ಅತೀವೃಷ್ಟಿಯಿಂದ ಈ ಬಾರಿ ಬೆಳೆ ತೆಗೆಯಲು ಅಸಾಧ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು. ಸೃಷ್ಟಿಯಾದ ಕೃತಕ ನೆರೆಯಿಂದ ಹಲವಾರು ರೈತರ ಕುಟುಂಬ ಮತ್ತು ಜಾನುವಾರುಗಳು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿಯು ಎದುರಾಗಿದೆ.
ಉತ್ತಮ ಬೆಳೆ ಬಾರದಿದ್ದಲ್ಲಿ ಕೃಷಿ ಸಾಲ ಪಡೆದು ವ್ಯವಸಾಯ ಮಾಡುತ್ತಿರುವ ರೈತರ ಪಾಡು ಶೋಚನೀಯ. ಸದ್ಯ ಪರಿಸ್ಥಿತಿಯಲ್ಲಿ ವ್ಯವಸಾಯದ ಆಸಕ್ತಿ ಜನ ಸಾಮಾನ್ಯರಲ್ಲಿ ಕ್ಷೀಣಿಸುತ್ತಿದ್ದು, ಕೃಷಿ ಕೆಲಸಗಳಿಗೆ ಜನ ಸಿಗದೆ ಕಷ್ಟಪಟ್ಟು ಮಾಡಿದ ಕೃಷಿಯು ನಾಶವಾಗಿದೆ. ಇಂತಹ ಪ್ರಕೃತಿ ವಿಕೋಪಗಳಿಂದ ರೈತರ ಉತ್ಸಾಹವು ಕುಂಠಿತಗೊAಡಿದೆ ಎಂದು ಪತ್ರದಲ್ಲಿ ಹೇಳಿದೆ. ಸದ್ಯದ ಪರಿಸ್ಥಿತಿಯಿಂದ ರೈತರಿಗೆ ಆರ್ಥಿಕ ಚೈತನ್ಯ ನೀಡುವ ದೃಷ್ಟಿಯಿಂದ ಅತೀವೃಷ್ಟಿಯಿಂದಾಗಿರುವ ನಷ್ಟವನ್ನು ಭರಿಸುವ ಸಲುವಾಗಿ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡಬೇಕಾಗಿ ಕೃಷಿ ಸಚಿವರಲ್ಲಿ ಮನವಿ ಮಾಡಿದೆ.

