Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕಲೆಗಳಲ್ಲಿ ವಿಶೇಷವಾದ ಕಲೆ ನಾಟಕ ಕಲೆ: ಕವಿ ಬಿ.ಆರ್‌ ಲಕ್ಷ್ಮಣ್‌ರಾವ್‌ ಐಶ್ವರ್ಯ ಕಲಾನಿಕೇತನದ ಆಷಾಡದ ಒಂದು ದಿನ ನಾಟಕ ಪ್ರದರ್ಶನಕ್ಕೆ ಚಾಲನೆ katavalivani


*ಬೆಂಗಳೂರು ಜನವರಿ 04*: ಎಲ್ಲಾ ಕಲೆಗಳ ಸಮ್ಮಿಲನವನ್ನು ಹೊಂದಿರುವ ವಿಶೇಷವಾದ ಕಲೆ ನಾಟಕ ಕಲೆ. ಗ್ರಾಮಾಂತರ ಪ್ರದೇಶಗಳಿಗೂ ಹವ್ಯಾಸಿ ನಾಟಕ ಕಲೆಯನ್ನು ಪಸರಿಸುವ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಸ್ವಾಗತಾರ್ಹ ಎಂದು *ಖ್ಯಾತ ಕವಿ ಲಕ್ಷ್ಮಣ್‌ ರಾವ್‌ ಹೇಳಿದರು*. 

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಆಯೋಜಿಸಿದ್ದ ಆಷಾಢದ ಒಂದು ದಿನ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಕಲೆಗಳನ್ನು ಮಿಳಿತಗೊಂಡಂತಹ ನಾಟಕ ಕಲೆ ಬಹಳ ಪ್ರಮುಖವಾದದ್ದು. ಕವಿಯಾಗಿ ನಾನು ಪ್ರಸಿದ್ದಿಯಾಗಿದ್ದರೂ ಒಂದೆರಡು ನಾಟಕಗಳನ್ನು ಕೂಡಾ ರಚಿಸಿದ್ದೇನೆ. ಕಾಳಿದಾಸನ ನಾಟಕದ ಮೇಲೆ ಆಧಾರಿತವಾಗಿರುವ ಈ ಪ್ರಸಿದ್ದ ನಾಟಕವನ್ನು ಈ ಕಲಾತಂಡ ಬೆಂಗಳೂರಿನಲ್ಲಿ ಪ್ರದರ್ಶನಗೊಳಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹವ್ಯಾಸಿ ನಾಟಕ ರಂಗವನ್ನು ಪ್ರಚುರ ಪಡಿಸುವಲ್ಲಿ ಐಶ್ವರ್ಯ ಕಲಾನಿಕೇತನ ಪ್ರಮುಖ ಪಾತ್ರವಹಿಸುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದರು. 

*ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ ಪಿ ಎಲ್‌ ವೆಂಕಟರಾಮರೆಡ್ಡಿ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಮುಂದೆ ಪ್ರತಿಬಾರಿಯೂ ಫಿಸಿಕಲ್‌ ಅದಂತಹ ಅಪಿರೆನ್ಸ್‌ ಬೇಡುವ ಕಲೆ ನಾಟಕ ಕಲೆ. ನಮ್ಮ ಭಾಗದ ಜನರಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ನೀಡುವಲ್ಲಿ ಐಶ್ವರ್ಯ ಕಲಾನಿಕೇತನ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ವೃತ್ತಿ ರಂಗ ಕಲೆ ಇಂದು ಕ್ರಮೇನ ಕ್ಷೀಣಿಸುತ್ತಿದೆ. ಆದರೆ, ಇಂತಹ ಹವ್ಯಾಸಿ ರಂಗತಂಡಗಳು ಬೇಸಿಗೆ ಶಿಬಿರಗಳು ಹಾಗೂ ನಾಟಕ ಪ್ರದರ್ಶನದ ಮೂಲಕ ಗ್ರಾಮಾಂತರ ಪ್ರದೇಶಕ್ಕೆ ನಾಟಕ ಕಲೆಯನ್ನು ತಗೆದುಕೊಂಡು ಹೋಗುತ್ತಿರುವುದು ನಿಜವಾಗಿಯೂ ಮೆಚ್ಚುವಂತಹ ಸಾರ್ಥಕ ಕೆಲಸ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಹನಾ ಸೋಮಶೇಖರ್‌ ನಿರ್ದೇಶನದ, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಅನುವಾದದ, ಜಿ.ವಿ ಪ್ರಸನ್ನ ಕುಮಾರ್‌ ನಿರ್ಮಾಣ ಮತ್ತು ನಿರ್ವಹಣೆ ಮಾಡಿದ, ಎಸ್‌ ಸೋಮಶೇಖರ್‌ ಅವರ ಸಂಚಾಲಕತ್ವದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಂದ ಆಷಾಢದ ಒಂದು ದಿನ ನಾಟಕವನ್ನು ಪ್ರದರ್ಶಿಸಲಾಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕರು ಹಾಗೂ ಉದ್ಯಮಿ ಜಿ. ಎನ್‌ ಮೂರ್ತಿ, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close