Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಗುಂಡ್ಮಿ ಮಹಾಕವಿ ಭಾಸನ ಕರ್ಣಭಾರ ಏಕಾಂಕದ ಪ್ರಥಮ ಯಕ್ಷಗಾನ ಪ್ರದರ್ಶನ-karavalivani,



ಕೋಟ : ಕೋಟ ವ್ಯಾಪ್ತಿ ಕಲೆ, ಸಾಹಿತ್ಯ, ಧಾರ್ಮಿಕ ಸಂಸ್ಕಾರ ಮತ್ತು ಸಾಂಸೃತಿಕ 
ವಿಚಾರಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಎಲ್ಲ ಚಟುವಟಿಕೆಗಳು ರಂಗಮ0ದಿರವನ್ನು ಬಿಟ್ಟು ಹೊರಗಡೆ ವಿಸ್ತರಿಸದೇ ಇರುವುದು ವಿಷಾಧನೀಯ ಎಂದು ಬ್ರಹ್ಮಾವರ ತಾಲ್ಲೂಕಿನ ತಹಶೀಲ್ದಾರ್ ರಾಜಶೇಖರಮೂರ್ತಿ ಹೇಳಿದರು.

ಗುಂಡ್ಮಿ ಸಾಲಿಗ್ರಾಮದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮAಟಪದಲ್ಲಿ ಶನಿವಾರ ಬೆಂಗಳೂರಿನ ಸಮಸ್ತರು ರಂಗಸAಶೋಧನಾ ಸಂಸ್ಥೆ ವತಿಯಿಂದ ಭಾಸ ಮಹಾಕವಿಯ ಕರ್ಣಭಾರ ಏಕಾಂಕದ ಪ್ರಥಮ ಯಕ್ಷಗಾನ ಪ್ರದರ್ಶನವನ್ನು ಚಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮಾವರ ಪರಿಸರದಲ್ಲಿ ಅಪಾರ ಸಾಹಿತ್ಯ ಭಂಡಾರ ಅಡಗಿದೆ. ಆದರೆ ಕರಾವಳಿಯ ಚಿಂತಕರ ಚಿಂತನೆಗಳು ಕರಾವಳಿಯನ್ನು ದಾಟಿ ಹೊರಗಡೆ ಹೋಗಿಲ್ಲ ಯಾಕೆ ಎನ್ನುವುದು ಪ್ರಶ್ನೆಯಾಗಿದೆ ಎಂದ ಅವರು ಅತ್ಯಂತ ಪ್ರತಿಭಾಶಾಲಿ ವ್ಯಕ್ತಿಯಾಗಿದ್ದ ಕರ್ಣನ ಒಳ್ಳೆಯ ಗುಣವೇ ಅವನ ಮೃತ್ಯುವಿಗೆ ಕಾರಣವಾಗಿರುವುದನ್ನು ಹೊಸ ದೃಷಿಕೋನದಲ್ಲಿ ನೋಡಬೇಕು. ಅಲ್ಲದೇ ಹೊಸ ರೂಪ ನೋಡಲು ಓದುಗರ ಓದುವ ಸ್ಥಿತಿಯಲ್ಲಿ ಬದಲಾಗಬೇಕು ಎಂದರು. 

ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ಮಾತನಾಡಿ ಕಲಾಕೇಂದ್ರಗಳು ಉತ್ತಮ ಸಂಸ್ಕಾರ ನೀಡುತ್ತಿದ್ದು, ಯುವ ಜನಾಂಗ ಹೆಚ್ಚು ಭಾಗವಹಿಸುವಂತಾಗಬೇಕು ಎಂದು ಹೇಳಿದರು.

ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ  ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, , ಕೆನರಾ ಬ್ಯಾಂಕಿನ ಅಧಿಕಾರಿ ಕಾರ್ಕಡ ಸೀತಾರಾಮ ಸೋಮಯಾಜಿ,

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ಉಪನ್ಯಾಸಕ ರಾಘವೇಂದ್ರ ತುಂಗ ಇದ್ದರು. ಹಾಡಿಯಾಟ ಪ್ರಯೋಗ ಪ್ರಸಿದ್ದಿಯ ಗೋಪಾಲಕೃಷ್ಠ ನಾಯರಿ ಅವರು ಕರ್ಣಭಾರವನ್ನು ಬಡಗುತಿಟ್ಟಿನ ಯಕ್ಷಗಾನವನ್ನಾಗಿಸ್ವಾತಂತ್ರ್ಯದ  ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪ್ರಯೋಗಿಸುತ್ತಿದ್ದು ವಿಶೇಷವಾಗಿತ್ತು. ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪರ ಪ್ರಧಾನ ಸಹಯೋಗದಲ್ಲಿ ರಂಗ ಕಲಾವಿದೆ ಸುಧಾ ಮಣೂರು ಅವರ ಪದವಿನ್ಯಾಸದಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಿತು.




Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close