ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಭೇಟಿ; ಮತಯಾಚನೆ karavalivani
ಕೋಟ: ವಿಧಾನ ಪರಿಷತ್ ಚುನಾವಣೆಯ ದ.ಕ., ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ನ.29ರಂದು ಸಾಲಿಗ್ರಾಮದಲ್ಲಿರುವ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕರ‍್ಯಕರ್ತರ ಜತೆ ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು, ಚುನಾವಣೆಯಲ್ಲಿ ಮೂವರೇ ಅಭ್ಯರ್ಥಿಗಳಿರುವುದರಿಂದ ನನ್ನ ಗೆಲುಯವು ನಿಶ್ಚಿತವಾಗಿದೆ. ಅದರೆ ಅತ್ಯಂತ ಹೆಚ್ಚು ಮತವನ್ನು ಪಡೆಯುವಂತಾಗಲು ನಿಮ್ಮೆಲ್ಲರ ಸಹಕಾರ ಬೇಕು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಕೇವಲ ಪ್ರಥಮ ಪ್ರಾಶಸ್ತ್ಯದ ಮತವನ್ನು ಮಾತ್ರ ನೀಡುವುದರ ಮೂಲಕ ಮತಗಳು ವಿಭಜನೆಯಾಗದಂತೆ ತಡೆಯಬೇಕು. ಅನ್ಯ ಪಕ್ಷದಲ್ಲಿರುವ ನಮ್ಮ ಹಿತೈಷಿಗಳಲ್ಲಿ ಮತ ನೀಡುವಂತೆ ಮನವೊಳಿಸಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಮಾತನಾಡಿದರು.
ಈ ಸಂದರ್ಭ ಕುಂದಾಪುರ ಬ್ಲಾಕ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ತಾ.ಪಂ. ಮಾಜಿ ಸದಸ್ಯ ರೋಶನಿ ಒಲಿವೇರಾ, ಕೆಪಿಸಿಸಿ ವಕ್ತಾರ ವಸಂತ ಬರ್ನಾಡ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರೋಶನ್ ಶೆಟ್ಟಿ, ಡೆರಿಕ್ ಡಿ ಸೋಜಾ, ವಿಕಾಸ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸಾಲಿಗ್ರಾಮ ಪ.ಪಂ. ಸದಸ್ಯ ಶ್ರೀನಿವಾಸ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
