ಕೋಟ: ಪಕ್ಷ ನೀಡಿದ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಭಾಯಿಸಿದ್ದೇನೆ,ಹಾಗೇ ಪಕ್ಷ ಕೂಡಾ ನನ್ನಂತವರನ್ನು ಬಹು ಎತ್ತರಕ್ಕೆ ಬೆಳೆಸಿದೆ ಆ ನಿಟ್ಟಿನಲ್ಲಿ ನನ್ನನ್ನೂ ಸೇರಿ ಪರಿಷತ್ ಚುನಾವಣೆಯಲ್ಲಿ 15ಸ್ಥಾನ ಗೆದ್ದೆ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸವಿದೆ ಎಂದು ವಿಧಾನ ಪರಿಷತ್ ಅಭ್ಯರ್ಥಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೋಟ ಹಾಗೂ ಸಾಲಿಗ್ರಾಮ ಬಿಜೆಪಿ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನಪರಿಷತ್ ಚುನಾವಣಾ ಪೂರ್ವಭಾವಿ ಸಭೆ ಸಾಲಿಗ್ರಾಮದ ಪಾರಂಪಳ್ಳಿ ವಿಷ್ಣುಮೂರ್ತಿ ಸಭಾಂಗಣದಲ್ಲಿ ಮಾತನಾಡಿ ಗ್ರಾಮಪಂಚಾಯತ್ ಸದಸ್ಯರ ಗೌರವಧನ ಹೆಚ್ಚಿಸುವಲ್ಲಿ ನಿರಂತವಾಗಿ ಶ್ರಮವಹಿಸಿದ್ದೆ 250 ರೂಗಳಿಂದ ಹಿಡಿದು ಪ್ರಸ್ತುತ 1100ರೂ ಹೆಚ್ಚಿಸುವಲ್ಲಿ ಪಂಚಾಯತ್ ಪ್ರತಿನಿಧಿಗಳ ಪರವಾಗಿ ಶ್ರಮಿಸಿದ್ದೇನೆ ಮುಂದಿನ ದಿನಗಳಲ್ಲಿ 2000ರೂ ಹೆಚ್ಚಿಸುವ ಪ್ರಸ್ತಾವನೆ ಸದನದಲ್ಲಿ ಧ್ವನಿ ಎತ್ತಿದ್ದೆನೆ. ಎಂದರಲ್ಲದೆ ಅವಿಭಜಿತ ಜಿಲ್ಲೆಗಳಲ್ಲಿ ನಮ್ಮ ಪಕ್ಷ ಪ್ರಾಬಲ್ಯ ಅತಿ ಹೆಚ್ಚು ಈ ದಿಸೆಯಲ್ಲಿ ಪಕ್ಷದ ಪ್ರತಿಯೊರ್ವ ಗ್ರಾಮಪಂಚಾಯತ್ ಸದಸ್ಯ ಅಥವಾ ನಗರ,ಪುರಸಭೆ,ಪಟ್ಟಣಪಂಚಾಯತ್ ಆಯ್ಕೆಯಾದ ಸದಸ್ಯರು ಶಿಸ್ತುಬದ್ಧ ರೀತಿಯಲ್ಲಿ ಮತ ಪ್ರಕ್ರೀಯೆಯಲ್ಲಿ ಯಾವುದೇ ಲೋಪಬಾರದ ರೀತಿಯಲ್ಲಿ ಮತದಾನಗೈಬೇಕಾದ ಅವಶ್ಯಕತೆ ಇದೆ.ಇದರಿಂದ ವಿಧಾನಪರಿಷತ್ನಲ್ಲಿ ಪಕ್ಷ ಸಂಖ್ಯಾಬಲ ಹೆಚ್ಚಿಸಿಕೊಂಡು ಸರಾಗವಾಗಿ ಸರಕಾರ ನಡೆಸಲು ಸಹಕಾರಿಯಾಗುತ್ತದೆ.ಇಷ್ಟು ದಿನ ನಾವು ಪರಿಷತ್ನಲ್ಲಿ ಯಾವುದೇ ವಿಷಯ ಮಂಡಿಸಿದರೂ ಪ್ರಾದೇಶಿಕ ಪಕ್ಷಗಳ ಸಹಕಾರ ಬಯಸಬೇಕಿತ್ತು ಇನ್ನು ಮುಂದೆ ನಮ್ಮ ಪಕ್ಷದ ಬಲ ಪರಿಷತ್ನಲ್ಲಿ ಕಾಣಲು ಸಾಧ್ಯವಾಗುವಂತೆ ಪಕ್ಷದ ಪಂಚಾಯತ್ ಪ್ರತಿನಿಧಿಗಳಿಗೆ ಮನವಿ ಮಾಡಿದರು.ನಮ್ಮ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಮಂಗಳೂರಿನಿAದ ಹಿಡಿದು ಬೈಂದೂರಿನ ತನಕ ನಮ್ಮೆಲ್ಲ ಶಾಸಕರು ಶ್ರಮ ವಹಿಸಿ ಹೋರಾಟಕ್ಕೆ ಧುಮುಕಿದ್ದಾರೆ.ಇದು ನಮ್ಮ ಯಶಸ್ಸಿಗೆ ಪ್ರೇರಣೆಯಾಗಿದೆ.ಭಾರತೀಯ ಜನತಾಪಾರ್ಟಿ ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಲು ಸದಾ ಸಿದ್ಧವಿದೆ ಎಂದು ಈಗಾಗಲೇ ರುಜುವಾತು ಮಾಡಿ ತೋರ್ಪಡಿಸಿದೆ ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ,ಪ್ರದಾನಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು,ಕುತ್ಯಾರು ನವೀನ ಶೆಟ್ಟಿ,ಕುಂದಾಪುರ ಮಂಡಲ ಪ್ರದಾನಕಾರ್ಯದರ್ಶಿ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ,ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್,ಸಾಲಿಗ್ರಾಮ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯೇಂದ್ರ ಪೂಜಾರಿ,ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ,ಉಪಾಧ್ಯಕ್ಷೆ ಅನುಸೂಯ ಹೇರ್ಳೆ,ವಿಷ್ಣುಮೂರ್ತಿ ದೇವಳದ ಅಧ್ಯಕ್ಷ ರಾಮಚಂದ್ರ ಉಪಾಧ್ಯ,ರಾಜು ಪೂಜಾರಿ,ಶಿವರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಸ್ವಾಗತಿಸಿದರು.ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ನಾಮನಿರ್ದೇಶಿತ ಸದಸ್ಯ ದೇವೇಂದ್ರ ದೇವಾಡಿಗ ನಿರೂಪಿಸಿದರು.