Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ವಕ್ವಾಡಿ- ಸಾಗರ ಸಿದ್ಧಿವಿನಾಯಕ ವುಡ್ ಇಂಡಸ್ಟ್ರೀಸ್ ಮತ್ತು ಆಶಾವಾಣಿ ಟ್ರಸ್ಟ್ ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆರೋಗ್ಯ ಶಿಬಿರ-karavalivani


ಕೋಟ: ಸಾಗರ ಸಿದ್ಧಿವಿನಾಯಕ ವುಡ್ ಇಂಡಸ್ಟ್ರೀಸ್ ಮತ್ತು ಆಶಾವಾಣಿ ಟ್ರಸ್ಟ್  ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆಯುರ್ವೇದ ಆರೋಗ್ಯ ಶಿಬಿರ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಕುಂದಾಪುರ ಸ್ವಾತಿ ಕ್ಲಿನಿಕ್‌ನ ಡಾ. ಶ್ರೀಪತಿ ಹೆಗ್ಡೆ ಉದ್ಘಾಟಿಸಿದರು. 

ಮುಖ್ಯ ಅತಿಥಿಗಳಾಗಿ ಸಾಗರ ಸಿದ್ಧಿ ವಿನಾಯಕ ವುಡ್  ಇಂಡಸ್ಟ್ರೀಸ್ ಮಾಲಕ ಗಣೇಶ್ ಆಚಾರ್ಯ, ವಕ್ವಾಡಿ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಆನಂದ ಆಚಾರ್ಯ, ಸದ್ಗುರು ಆಯುರ್ವೇದ ಸಂಸ್ಥೆಯ ಗಣೇಶ್ ಶೆಟ್ಟಿ, ಸಾಲಿಗ್ರಾಮ ಆಶಾವಾಣಿ ಟ್ರಸ್ಟ್ನ ಟ್ರಸ್ಟಿಗಳಾದ ಡಾ.ವಾಣಿಶ್ರೀ ಐತಾಳ್, ಆಶಾ ಹೆಗ್ಡೆ ಉಪಸ್ಥಿತರಿದ್ದರು.

 ಆರೋಗ್ಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಸುಮಾರು 100 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗಿಯಾಗುವುದರ ಮೂಲಕ ಉಚಿತ ಆರೋಗ್ಯ ಶಿಬಿರ ಪ್ರಯೋಜನ ಪಡೆದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close