Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಇದರ ವಾರ್ಷಿಕ ಮಹಾಸಭೆ - ಶೇ 15% ಡಿವಿಡೆಂಡ್ ಘೋಷಣೆ-karavalivani,


ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ  ಇದರ  ವಾರ್ಷಿಕ ಮಹಾಸಭೆ ನ.28 ರಂದು ಶಿವಕೃಪಾ ಕಲ್ಯಾಣ ಮಂಟಪ ಸಾಸ್ತಾನದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಪಿ. ಎಸ್ ಅಧ್ಯಕ್ಷತೆಯಲ್ಲಿ ಜರುಗಿತು. 

ಸಂಘವು 2021ರ  ಆರ್ಥಿಕ ವರ್ಷಾಂತ್ಯಕ್ಕೆ ಶೇ 97.18 ರಷ್ಟು ಸಾಲ ವಸೂಲಾತಿಗೊಂಡಿದ್ದು, ಲೆಕ್ಕಪರಿಶೋಧನೆ ವರ್ಗೀಕರಣ `ಎ' ತರಗತಿಯಾಗಿದ್ದು ವರದಿ ಸಾಲಿನಲ್ಲಿ ಸಂಘ ರೂ. 88 ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು,  ಸದಸ್ಯರಿಗೆ ಶೇ 15  ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಲಾಯಿತು.ಈ ಸಂಧರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಹಿರಿಯ ಕೃಷಿಕರಾದ  ಎ. ಜಗದೀಶ ಕಾರಂತ ಐರೋಡಿ,  ನಾರಾಯಣ ಮರಕಾಲ ಪಾಂಡೇಶ್ವರ ,  ಜುಲಿಯಸ್ ಎಂ. ರೋಚ್ ಮೂಡಹಡು ,  ಮೈಕಲ್ ಡಿಸೋಜ ಬಾಳೇಕುದ್ರು ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಹಾಗೂ  ಸದಾಶಿವ ಪೂಜಾರಿ ಪಾಂಡೇಶ್ವರ ಇವರಿಗೆ ಆಧುನಿಕ ಕೃಷಿ ಪದ್ಧತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021 ರ ದ್ವಿತೀಯ ಪಿ.ಯು.ಸಿ ಮತ್ತು ಹತ್ತನೇ ತರಗತಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

 ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ  ಸುರೇಶ ಅಡಿಗ,  ರಾಜಶೇಖರ ಪೂಜಾರಿ,  ಡೆರಿಕ್ ಡಿಸೋಜಾ, ಗೋವಿಂದ ಪೂಜಾರಿ,   ಸಂತೋಷ ಪೂಜಾರಿ,  ಕಮಲ ಆಚಾರ್,  ಗೀತಾ ಎಸ್ ಅಧಿಕಾರಿ,  ಉದಯ ಮರಕಾಲ,  ಶೇಖರ ಗದ್ದೆಮನೆ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಆನಂದ ಗಾಣಿಗ  ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ  ವಿಜಯ ಪೂಜಾರಿ ವರದಿ ವಾಚಿಸಿ, ನಿರ್ದೇಶಕರಾದ ರಮೇಶ ಕಾರಂತ ವಂದಿಸಿ , ಸಂಘದ ಸಿಬ್ಬಂದಿ ಸುರೇಶ ಪೂಜಾರಿ ಪ್ರಾರ್ಥನೆ ಮಾಡಿ ಕೇಶವ ಅಚಾರ್ ಕಾರ್ಯಕ್ರಮ ನಿರೂಪಿಸಿದರು.


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close