ಎಲ್ಲಾ ರಂಗಗಳoತೆಯೇ ರಂಗಭೂಮಿಯೂ ತನಗಾದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳಬೇಕಾದ ಅಗತ್ಯತೆ ಇದೆ- ರಂಗಕರ್ಮಿ ಗೋಪಾಲಕೃಷ್ಣ ನಾಯರಿ karavalivani
ಕೋಟ: ನಾಟಕವೊಂದನ್ನು ಕಟ್ಟುವುದು, ಪ್ರದರ್ಶಿಸುವುದು ಬಲು ಕಷ್ಟ. ಅ ಸಾಹಸಕ್ಕಿಳಿದು ನಾಟಕ ಪ್ರದರ್ಶನಕ್ಕೆ ಮುಂದಾಗಿರುವ ರಸರಂಗ ಕೋಟಕ್ಕೆ ಮೆಚ್ಚುಗೆಯನ್ನ ಸೂಚಿಸಲೇಬೇಕು. ಎಂದು ನಾಡಿನ ಪ್ರಸಿದ್ಧ ನಟ,ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದ್ದಾರೆ.
ಇತ್ತೀಚೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮoಟಪದಲ್ಲಿ ರಸರಂಗ ಕೋಟವು ಆಯೋಜಿಸಿದ್ದ ಅಂಧಯುಗ ನಾಟಕದ ಪ್ರಾಯೋಗಿಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅಭ್ಯಾಗತರಾಗಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ನಟ,ನಿರ್ದೇಶಕ ಹಾಗೂ ಹಂಗಾರಕಟ್ಟೆ ಕಲಾಕೇಂದ್ರದ ವ್ಯವಸ್ಥಾಪಕರಾಗಿದ್ದ ದಿವಂಗತ ವೈಕುಂಠ ಹೆಬ್ಬಾರರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಗುಂಡ್ಮಿ ರಾಮಚಂದ್ರ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಧಾ ಮಣೂರು ರವರು ವಂದಿಸಿದರು.
ತದನಂತರ ಸುಧಾ ಮಣೂರು ನಿರ್ದೇಶಿತ ರಸರಂಗ ತಂಡದಿoದ, ಪ್ರಶಾಂತ್ ಶೆಟ್ಟಿ ಹಾಗೂ ಪುನೀತ್ ಶೆಟ್ಟಿ ಸಂಗೀತ ನೀಡಿರುವ, ಧರ್ಮವೀರ ಭಾರತಿಯವರ ಅಂಧಯುಗ ನಾಟಕ ಪ್ರದರ್ಶನಗೊಂಡಿತು.
ಇತ್ತೀಚೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮoಟಪದಲ್ಲಿ ರಸರಂಗ ಕೋಟವು ಆಯೋಜಿಸಿದ್ದ ಅಂಧಯುಗ ನಾಟಕದ ಪ್ರಾಯೋಗಿಕ ಪ್ರದರ್ಶನವನ್ನು ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಉದ್ಘಾಟಿಸಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ, ರಸರಂಗ ತಂಡದ ಸುಧಾ ಮಣೂರು ಮತ್ತಿತರರು ಉಪಸ್ಥಿತರಿದ್ದರು.
