Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ನೀಲಾವರ ವಿಶ್ವ ವಿಕಲಚೇತನರ ದಿನಾಚರಣೆ-karavalivani



ಶ್ರೀ ಪೇಜಾವರ ಅಧೋಕ್ಷಜ ಮಠದ ಅಂಗಸoಸ್ಥೆಯಾದ ವಿಶ್ವಜನೀನ ಟ್ರಸ್ಟ್ನ ಸುಮೇಧ ಪ್ರಜ್ಞಾ ವಿಕಾಸ ಕೇಂದ್ರ ಮತ್ತು ರೋಟರಿ ಕ್ಲಬ್ ಮಣಿಪಾಲ, ರೋಟರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯು  ನೀಲಾವರದ ಸುಮೇಧ ಪ್ರಜ್ಞಾ ವಿಕಾಸ ಕೇಂದ್ರದಲ್ಲಿ ನಡೆಯಿತು. ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮವನ್ನು ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ, ನಂತರ ಮಾತನಾಡಿ ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳಲು ಎಲ್ಲರಿಂದಲೂ ಆಗುವುದಿಲ್ಲ ಒಂದು ಪರಿಣಿತಿ ಬೇಕು ಇನ್ನೊಂದು ಸೇವಾಮನೋಭಾವ ಎರಡು ಇದ್ದರೆ ಮಾತ್ರ ವಿಕಲಚೇತನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯ. ಕೋವಿಡ್ ನಿಂದಾಗಿ ಈ ರೀತಿಯ ಹಲವು ಸಂಸ್ಥೆಗಳಿಗೆ ಮತ್ತು ಮಕ್ಕಳ ಕಲಿಕೆಗೂ ಸಮಸ್ಯೆಯಾಗಿದೆ. ಸುಮೇಧ ಶಾಲೆಯ ಅಭಿವೃದ್ಧಿಗೆ ಸರಕಾರದಿಂದ  ಸಾಧ್ಯವಾದದ್ದನ್ನು ನಾನು ಸಹಕರಿಸುವೆ ಎಂದರು. ನೀಲಾವರ ಗೋಶಾಲೆ ಬಳಿ 2ಕೋಟಿ ವೆಚ್ಚದಲ್ಲಿ ಪೇಜಾವರ ಶ್ರೀಪಾದರ ಸ್ಮೃತಿ ವನ ನಿರ್ಮಾಣವಾಗಲಿದೆ ಎಂದರು.  ಸಂಪನ್ಮೂಲ ವ್ಯಕ್ತಿ ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ವಿಕಲಚೇತನರಲ್ಲಿ ನಾಯಕತ್ವ ಬೆಳೆಸಬೇಕು, ಇದರಿಂದ ಅವರಲ್ಲಿ ಧೈರ್ಯವನ್ನು ಹೆಚ್ಚಿಸಿದಂತಾಗುತ್ತದೆ. ಎಂದರು. ಸಂಸ್ಥೆಯ ಬಗ್ಗೆ ಮತ್ತು ಬುದ್ಧಿಮಾಂದ್ಯತೆ ಹೇಗೆ ಮಕ್ಕಳಲ್ಲಿ ಶುರುವಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು ಮತ್ತು ಸರ್ಕಾರ ಇವರನ್ನು ವಿಕಲಚೇತನರು ಎಂದು ಕರೆಯುತ್ತಾರೆ ನಾನು ಇವರನ್ನು ವಿಶ್ವಚೇತನರು ಎಂದು ಕರೆಯುತ್ತೇನೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ 
ಮುಖ್ಯ ಅತಿಥಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ  ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್  ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಮಣಿಪಾಲ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಉಡುಪಿ ರೋಟರಿ ಅಧ್ಯಕ್ಷ ಹೇಮಂತ್ ಯು.ಕಾಂತ್ ಉಪಸ್ಥಿತರಿದ್ದರು. ಕಾಯಕ್ರಮದಲ್ಲಿ ಆಶಾ ನಿಲಯದ ವಿಕಲಚೇತನರ ಶಾಲೆಯ ಶಿಕ್ಷಕಿ ಆಗ್ನೇಸ್ ಹೇಮಾವತಿ ಕುಂದರ್, ಶಾರದಾ ಸುರೇಂದ್ರ ನಾಯಕ್, ವಿಕಲಚೇತನರಾಗಿ ಸಾಧನೆ ಮಾಡಿದ ಶುಭಂ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಶಾಲೆಗೆ ದಾನಿಗಳಿಂದ ಕೊಡಮಾಡಿದ ಉಪಕರಣಗಳನ್ನು ಈ ಸಮಯದಲ್ಲಿ ಹಸ್ತಾಂತರಿಸಲಾಯಿತು.

 
ರೋ.ರಾಮಚoದ್ರ ಉಪಾದ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ರೋಟರಿ ಅಧ್ಯಕ್ಷ ಹೇಮಂತ್ ಯು.ಕಾಂತ್ ಸ್ವಾಗತಿಸಿ, ರೋ.ಗುರುರಾಜ್ ಭಟ್, ರೋ.ಗೋಪಾಲಕೃಷ್ಣ ಪ್ರಭು, ರೋ.ಅಬ್ದುಲ್ ರಹೀಮಾನ್ ಸನ್ಮಾನ ಪತ್ರ ವಾಚಿಸಿದರು. ರೋ.ಜನಾರ್ಧನ್ ಭಟ್ ಕಾರ್ಯಕ್ರಮ ನಿರೂಪಿಸಿ, ವಿಶ್ವಸ್ಥ ಮಂಡಳಿಯ ಟ್ರಸ್ಟಿ ರಘುರಾಮ ಆಚಾರ್ಯ ವಂದಿಸಿದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close