Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ದಿ| ಶಂಕರ ನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮ


 


ಕೋಟ: ಯಕ್ಷಗಾನ ಪೋಷಕರೂ,ಯಕ್ಷಗಾನ ಕಲಾಕೇಂದ್ರದ ಸರ್ವೋತೋಮುಖ  ಅಭಿವೃಧ್ದಿಗೆ ಶ್ರಮಿಸಿದ್ದ ದಿವಂಗತ ಗುಂಡ್ಮಿ ಶಂಕರನಾರಾಯಣ ಉಪಾದ್ಯರ ಸಂಸ್ಮರಣಾ ದಿನವನ್ನು ಡಿ. 05 ರಂದು ಬಾನುವಾರ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮoಟಪದಲ್ಲಿ ಸಂಜೆ ಗಂಟೆ 5-30 ಕ್ಕೆ ಆಚರಿಸಲಾಗುವುದು. ದಿವಂಗತರ ನೆನಪಿನಲ್ಲಿ ಒಬ್ಬ ಅಶಕ್ತ ಕಲಾವಿದರಿಗೆ ಪ್ರತೀ ವರ್ಷ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ವರ್ಷ ಕಲಾವಿದ ಮಹೇಶ ಮಂದಾರ್ತಿ ಇವರಿಗೆ ಹಸ್ತಾಂತರಿಸಲಾಗುವುದು. ಅಂದು ನಳ ದಮಯಂತಿ ಯಕ್ಷಗಾನ ಪ್ರದರ್ಶನವಿದ್ದು, ಕಲಾವಿದರಾದ ಚಂದ್ರಕಾoತ ಮೂಡುಬೆಳ್ಳೆ, ಕೆ.ಜೆ.ಸುಧೀಂದ್ರ, ಕೋಟ ಶಿವಾನಂದ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಮಂದಾರ್ತಿ ಪ್ರಸನ್ನ ಶೆಟ್ಟಿಗಾರ್, ಮುಗ್ವಾ ಗಣೇಶ ನಾಯಕ್ , ಚಪ್ರಮನೆ ಶ್ರೀಧರ ಹೆಗಡೆ, ಪ್ರತೀಶ್ ಕುಮಾರ್ ಬ್ರಹ್ಮಾವರ, ನರಸಿಂಹ ತುಂಗರು ಭಾಗವಹಿಸಲಿದ್ದಾರೆಂದು ಉಪಾಧ್ಯ ಕುಟುಂಬದ ರವೀಂದ್ರ ಉಪಾದ್ಯ ಮತ್ತು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close